ಭವಿಷ್ಯದ ಬಳಕೆದಾರರಿಗೆ ಅತ್ಯುತ್ತಮ ಮೊಬೈಲ್ ಸೇವೆಗಳನ್ನು ಒದಗಿಸಿದ್ದಕ್ಕೆ ರಿಲಯನ್ಸ್ ಜಿಯೋ, ಸ್ಯಾಂಸಂಗ್ ಎಲಕ್ಟ್ರಾನಿಕ್ಸ್‌ಗೆ ಗ್ಲೋಬಲ್ ಮೊಬೈಲ್ ಅವಾರ್ಡ್ಸ್ 2017 ಸಿಕ್ಕಿದೆ. ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
ಡಿಜಿಟಲ್ ಅಂತರನ್ನು ಅಳಿಸಿಹಾಕಿ, ದೇಶವನ್ನು ಡಿಜಿಟಲ್ ಕ್ಷೇತ್ರದಲ್ಲಿ ಶಕ್ತಿಯುತವಾಗಿ ರೂಪಿಸುವಲ್ಲಿ ಜಿಯೋ, ಸ್ಯಾಂಸಂಗ್ ಮಾಡಿದ ಕೃಷಿಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ಡಾಟಾವನ್ನು ಅತ್ಯಂತ ವೇಗವಾಗಿ ಬದಲಾಯಿಸುವ ಎಲ್‌ಟಿಇ ತಂತ್ರಜ್ಞಾನವನ್ನು ಬಳಕೆಗೆ ತರುವ ಮೂಲಕ, ಉಚಿತ ಕರೆಗಳು, ಜಗತ್ತಿನಲ್ಲೇ ಅತ್ಯಂತ ಕಡಿಮೆ ಬೆಲೆ ಡಾಟಾ ನೀಡುತ್ತಿರುವ ಕಾರಣ, ಗ್ರಾಮೀಣ ಪ್ರದೇಶಗಳಿಗೆ ಮಾಹಿತಿ, ತಂತ್ರಜ್ಞಾನ ಬಹಳ ವೇಗವಾಗಿ ತಲುಪಿದೆ ಎಂದು ಪ್ರಶಂಸಿಸಲಾಗಿದೆ.
ಡಿಜಿಟಲ್ ಭಾರತವನ್ನು ಪರಿಚಯಿಸುವ ಮೂಲಕ ಎರಡೂ ಕಂಪೆನಿಗಳು ಬೆರೆತು ಕಾರ್ಯನಿರ್ವಹಿಸುತ್ತಿವೆ ಎಂದು ಜಿಯೋ ಆಧ್ಯಕ್ಷ ಜ್ಯೋತಿಂದ್ರ ಥಾಕರ್, ಸ್ಯಾಂಸಂಗ್ ಎಲಕ್ಟ್ರಾನಿಕ್ಸ್ ಅಧ್ಯಕ್ಷ ಯೋಂಗಿ ಕಿಮ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.