ನವದೆಹಲಿ: ರಿಲಯನ್ಸ್ ಜಿಯೋ ಅಗ್ಗದ ದರದ ಮೊಬೈಲ್ ಫೋನ್ ಗಳು ತಯಾರಾಗುವುದು ಎಲ್ಲಿ? ಚೀನಾದಿಂದ ರಿಲಯನ್ಸ್ ಸಂಸ್ಥೆ ಈ ಫೋನ್ ಗಳನ್ನು ಆಮದು ಮಾಡಿಕೊಳ್ಳುತ್ತಿದೆಯೇ?
ಈ ಬಗ್ಗೆ ರಿಲಯನ್ಸ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಚೀನಾದಿಂದ ಆಮದು ಸುಂಕದ ಹೊರೆ ಬೀಳದಂತೆ ಉಪಾಯವಾಗಿ ಬೇರೆ ಮಾರ್ಗದ ಮೂಲಕ ಮೊಬೈಲ್ ಸೆಟ್ ಗಳನ್ನು ತರಿಸಿಕೊಳ್ಳುತ್ತಿದೆ ಎಂಬ ಆಪಾದನೆಗಳನ್ನು ರಿಲಯನ್ಸ್ ನಿರಾಕರಿಸಿದೆ.
ತನ್ನ 4 ಜಿ ಫೋನ್ ಗಳನ್ನು ಚೀನಾದಿಂದ ತರಿಸಿಕೊಳ್ಳುತ್ತಿಲ್ಲ. ಇವೆಲ್ಲಾ ಭಾರತದಲ್ಲೇ ತಯಾರಾಗುತ್ತಿವೆ. ಹಾಗಿರುವಾಗ ಆಮದು ಸುಂಕದ ಪ್ರಶ್ನೆ ಎಲ್ಲಿ ಬರುತ್ತದೆ. ಇಂತಹ ವರದಿಗಳೆಲ್ಲಾ ಬರೀ ಸುಳ್ಳು ಎಂದು ರಿಲಯನ್ಸ್ ಸಂಸ್ಥೆ ಹೇಳಿಕೊಂಡಿದೆ.
ಸರಿಯಾದ ಕ್ರಮದಲ್ಲೇ ಚೀನಾದಿಂದ ಮೊಬೈಲ್ ಫೋನ್ ಗಳ ಬಿಡಿಭಾಗಗಳನ್ನು ತರಿಸಿಕೊಳ್ಳುತ್ತಿದ್ದೆವು. ಇನ್ನೀಗ ಇಂಡೋನೇಷ್ಯಾದಿಂದ ಶೂನ್ಯ ಶೇಕಡಾ ಆಮದು ಸುಂಕದ ದರದಲ್ಲಿ ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳಲಿದ್ದೇವೆ. ಆದರೆ ಮೊಬೈಲ್ ತಯಾರಿಕೆ ಸಂಪೂರ್ಣವಾಗಿ ಭಾರತದಲ್ಲೇ ಆಗುತ್ತದೆ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.