ಮುಂಬೈ: ಜಗತ್ತು ಸ್ಮಾರ್ಟ್ ಫೋನ್‌ಗಳ ಜೊತೆಗೆ ಹೆಜ್ಜೆಯನಿರಿಸುತ್ತಿದೆ. ಕಾಲದಿಂದ ಕಾಲಕ್ಕೆ ಬದಲಾಗುವ ಸಮಯದಲ್ಲಿ ಮೊಬೈಲ್ ಲೋಕದಲ್ಲೂ ಹೊಸ ಕ್ರಾಂತಿ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಪ್ರತಿನಿತ್ಯವು ಹೊಸತನ ಬಯಸುವ ನಮಗೆ ರಿಡ್ ಮೀ ಇದೀಗ ತನ್ನ ನೂತನ ಫೋನ್ ಮೂಲಕ ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಅದರ ವೈಶಿಷ್ಟ್ಯಗಳೇನು ಎಂಬಿತ್ಯಾದಿ ವಿವರಣೆಗಳು ನಿಮಗಾಗಿ ಇಲ್ಲಿವೆ.
ರೆಡ್ ಮೀ, ಮೊಬೈಲ್ ಲೋಕದಲ್ಲಿ ಸಂಚಲನ ಮೂಡಿಸಿದ್ದು ಕಡಿಮೆ ದರ ಹಾಗೂ ಹೆಚ್ಚಿನ ವೈಶಿಷ್ಟ್ಯಗಳಿಂದ ಇದು ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಮೂಡಿಸಿರುವ ಬ್ರಾಂಡ್ ಇದಾಗಿದೆ. ಇದೀಗ ಇದು ತನ್ನ ಗ್ರಾಹಕರಿಗಾಗಿ ನೂತನವಾಗಿ ಹೊಸ 2 ಮೊಬೈಲ್‌ಗಳನ್ನು ಪರಿಚಯಿಸುತ್ತಿದ್ದು, ರೆಡ್‌ಮೀ 5A 16GB ಮತ್ತು ರೆಡ್‌ಮೀ 5A 32GB ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಮತ್ತು ಇದು ನಿಮಗೆ ಫ್ಲಿಪ್‌ಕಾರ್ಟ್‌ನಲ್ಲೂ ಸಹ ಲಭ್ಯವಿರುತ್ತದೆ. ಈ ಎರಡು ಮೊಬೈಲ್‌ಗಳು ಗೋಲ್ಡ್ ಮತ್ತು ಗ್ರೇ ಈ ಎರಡು ಬಣ್ಣಗಳಲ್ಲಿ ಲಭ್ಯವಿದ್ದು ಸಾಕಷ್ಟು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ. ರೆಡ್‌ಮೀ 5A 16GB ಇದು 16 GB ಆಂತರಿಕ ಮೆಮೋರಿಯನ್ನು ಹೊಂದಿದ್ದು 12.7 cm (5) HD IPS ಪರದೆಯನ್ನು ಹೊಂದಿದೆ ಅಲ್ಲದೇ 3000 mAh ಬ್ಯಾಟರಿಯನ್ನು ಸಹ ಇದು ಹೊಂದಿದೆ. ಇದರಲ್ಲಿ Dual Sim ಬಳಸುವ ಅವಕಾಶವಿದ್ದು Qualcomm Snapdragon 425 ಫ್ರೊಸೆಸರ್ ಹಾಗೂ Android Nougat 7.1.2 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸುತ್ತದೆ ಇದು 2 GB RAM ಹೊಂದಿದ್ದು 128 GB ವರೆಗೆ ವಿಸ್ತರಿಸಬಹುದಾದ ಸಂಗ್ರಹಣೆಯನ್ನು ಹೊಂದಿದೆ.
ಇದರಲ್ಲಿ ಮುಖ್ಯವಾಗಿ 13MP ಪ್ರಾಥಮಿಕ ಕ್ಯಾಮರಾ ಇದ್ದು ಎರಡನೆ ಕ್ಯಾಮರಾ 5MP ಇದ್ದು ಅಲ್ಲದೇ ಫ್ಲಾಷ್ ಲೈಟ್ ಅನ್ನು ಕೂಡಾ ಹೊಂದಿದೆ. ಉಳಿದಂತೆ ಮೈಕ್ರೋ USB ಫೋರ್ಟ್, ಬ್ಲೂಟೂತ್, ವೈ-ಫೈ, GPS ಸೌಲಭ್ಯವನ್ನು ಇದು ಹೊಂದಿದೆ. ರೆಡ್‌ಮೀ 5A 32GB ಮೊಬೈಲ್ ಕೂಡಾ ರೆಡ್‌ಮೀ 5A 16GB ನಂತೆಯೇ ವೈಶಿಷ್ಟ್ಯವನ್ನು ಹೊಂದಿದ್ದು ಇದರಲ್ಲಿ ಆಂತರಿಕ ಮೆಮೋರಿಯನ್ನು 32GB ಇದ್ದು 3GB RAM ಅನ್ನು ಹೊಂದಿರುವುದು ವಿಶೇಷವಾಗಿದೆ. ರೆಡ್‌ಮೀ ಮೊದಲಿನಿಂದಲೂ ಗ್ರಾಹಕರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮೊಬೈಲ್ ನೀಡುತ್ತಾ ಬಂದಿದ್ದು ಇದೇ ವೈಶಿಷ್ಟ್ಯವಿರುವ ಬೇರೆ ಮೊಬೈಲ್‌ಗೆ ಹೋಲಿಸಿದರೆ ಇದರ ದರ ಕಡಿಮೆ ಎಂದೇ ಹೇಳಬಹುದು ರೆಡ್‌ಮೀ 5A 16GB ತನ್ನ ಬೆಲೆಯನ್ನು ಫ್ಲಿಪ್ ಕಾರ್ಟ್‌ನಲ್ಲಿ 4999 ಹಾಗೂ ರೆಡ್‌ಮೀ 5A 32GB 6999 ಇದೆ ಇದು ಮಾರುಕಟ್ಟೆಯಲ್ಲಿರುವ ಉಳಿದ ಮೊಬೈಲ್‌ಗೆ ಹೋಲಿಸಿದಲ್ಲಿ ಕಡಿಮೆ ಎಂದೇ ಹೇಳಬಹುದಾಗಿದೆ. ನೀವು ಕೂಡಾ ಈ ಮೊಬೈಲ್ ನಿಮ್ಮದಾಗಿಸಿಕೊಳ್ಳಲು 14 ಡಿಸೆಂಬರ್‌ವರೆಗೆ ಕಾಯಲೇಬೇಕು.
ಒಟ್ಟಿನಲ್ಲಿ ಗ್ರಾಹಕರನ್ನು ಒಲಿಸಿಕೊಳ್ಳಲು ತನ್ನ ವೈಶಿಷ್ಟ್ಯಯುತ ಮತ್ತು ದರದ ಮೂಲಕ ರೆಡ್‌ಮೀ ಗ್ರಾಹಕರನ್ನು ತನ್ನತ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.