ಡೆಬಿಟ್ ಕಾರ್ಡ್ ಬಳಕೆ ಮೇಲೆ ಗ್ರಾಹಕರು ಮತ್ತು ವರ್ತಕರಿಗೆ ವಿಧಿಸುವ ಸೇವಾ ಶುಲ್ಕದ (ಎಂಡಿಆರ್) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಎಂಡಿಆರ್ ರದ್ದಿನಿಂದ ಬ್ಯಾಂಕ್‌ಗಳ ಮೇಲೆ ಬೀಳುವ ಭಾರವನ್ನು ಭರ್ತಿ ಮಾಡುವುದಾಗಿ ಆರ್‌ಬಿಐ ತಿಳಿಸಿದೆ. ಜನವರಿ 1ರಿಂದ ಇರುವ ಬಾಕಿಯನ್ನು ಬ್ಯಾಂಕ್‌ಗಳಿಗೆ ಮರುಪಾವತಿ ಮಾಡುವುದಾಗಿ ತಿಳಿಸಿದೆ.
ಸರಕಾರ ಆರಂಭಿಸಿರುವ ಡಿಜಿಟಲ್ ಇಂಡಿಯಾ ಯೋಜನೆಯನ್ನು ಜಾರಿ ಮಾಡ್ದುವ ಉದ್ದೇಶದಿಂದ ಜ.1, 2017ರಿಂದ ಡೆಬಿಟ್ ಕಾರ್ಡುಗಳ ಮೇಲಿನ ಟ್ಯಾಕ್ಸ್ ಅಂಡ್ ನಾನ್ ಟ್ಯಾಕ್ಸ್ ಬಾಕಿಯನ್ನು ಆಯಾ ಬ್ಯಾಂಕ್‌ಗಳಿಗೆ ಪಾವತಿ ಮಾಡುವುದಾಗಿ ಪ್ರಕಟಣೆಯಲ್ಲಿ ಆರ್‌ಬಿಐ ತಿಳಿಸಿದೆ.
ಎಂಡಿಆರ್ ಬಾಕಿ ಹಣಕ್ಕಾಗಿ ತ್ರೈಮಾಸಿಕ ಆಧಾರದ ಮೇಲೆ ಆಡಿಟರ್ ಪ್ರಮಾಣಪತ್ರಗಳೊಂದಿಗೆ ಆರ್‌ಬಿಐ ನಾಗ್ಪುರ ಕಾರ್ಯಾಲಯವನ್ನು ಸಂಪರ್ಕಿಸಬೇಕೆಂದು ಕೋರಿದೆ. ఇನ್ನೊಂದು ಕಡೆ ಗ್ರಾಮೀಣ ಭಾಗದ ಬ್ಯಾಂಕುಗಳಲ್ಲಿ ಗೋಲ್ಡ್ ಲೋನ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.