ಹಳೆ ರು.500 ಮತ್ತು ರು.1000 ನೋಟುಗಳನ್ನು ನಿಷೇಧಿಸಿದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ರೂ.2000 ಮತ್ತು ರೂ. 500 ನೋಟುಗಳನ್ನು ಚಲಾವಣೆಗೆ ತಂದಿದೆ. ಆದರೆ 2,000 ನೋಟಿಗಿಂತ ರೂ.500 ನೋಟು ತಡವಾಗಿ ಬಂದಿದ್ದು ಗೊತ್ತೇ ಇದೆ.
ಈ ಹೊಸ ನೋಟಿನಲ್ಲಿ ಮಹಾತ್ಮಾಗಾಂಧಿ (ಹೊಸ) ಸೀರೀಸ್ ಒಳಗೆ ಯಾವುದೇ ಅಕ್ಷರ ಇಲ್ಲದಂತೆ ತರಲಾಗಿದೆ. ಇದರ ಮೇಲೆ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಹಸ್ತಾಕ್ಷರ, 2016ರ ವರ್ಷದಲ್ಲಿ ಮುದ್ರಿಸಿರುವುದಾಗಿ ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ವಿನ್ಯಾಸವನ್ನೂ ಮಹಾತ್ಮಾಗಾಂಧಿ (ನ್ಯೂ) ಸೀರೀಸ್‌ನ ಭಾಗವಾಗಿಯೇ ತರಲಾಗಿದೆ ಎಂದು ತಿಳಿಸಿದೆ. ಎಲ್ಲಾ ನೋಟುಗಳು ಇದೇ ಸೀರೀಸ್‌ನಲ್ಲಿ ಮುಂದುವರೆಯಲಿವೆಯಂತೆ. ಅಧಿಕ ಮೌಲ್ಯದ ರೂ.500 ಮತ್ತು ರೂ.1000 ನೋಟುಗಳನ್ನು ರದ್ದು ಮಾಡುತ್ತಿರುವುದಾಗಿ ಕೇಂದ್ರ ಸರಕಾರ ನವೆಂಬರ್ 8ರಂದು ಘೋಷಿಸಿದ್ದು ಗೊತ್ತೇ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.