ಭಾರತದಲ್ಲಿ ದೇಶೀಯ ವಿಮಾನಯಾನ ಸಂಸ್ಥೆ ಆರಂಭಿಸಬೇಕೆಂದು ಗಲ್ಫ್ ವಿಮಾನಯಾನ ಸಂಸ್ಥೆ ಖತಾರ್ ಏರ್‌ವೇಸ್ ನಿರ್ಧರಿಸಿದೆ. ಗಲ್ಫ್ ಸರಕಾರಿ ಆರ್ಥಿಕ ಸಂಸ್ಥೆ (ವೆಲ್ತ್ ಫಂಡ್) ಸ್ಟೇಟ್ ಆಫ್ ಖತಾರ್ ಜತೆಗೆ ಈ ಸಂಸ್ಥೆಯನ್ನು ಆರಂಭಿಸಬೇಕೆಂಬುದು ತಮ್ಮ ಯೋಜನೆ ಎಂದು ಅನಿ, ಬರ್ಲಿನ್‌ನಲ್ಲಿ ನಡೆದ ಸಮಾರಂಭದಲ್ಲಿ ಖತಾರ್ ಏರ್‌ವೇಸ್ ಮುಖ್ಯ ಎಗ್ಜಿಕ್ಯೂಟೀವ್ ಅಕ್ಬರ್ ಆಲ್ ಬಕರ್ ತಿಳಿಸಿದ್ದಾರೆ.
ದೇಶೀಯ ವಿಮಾನಯಾನ ಕ್ಷೇತ್ರಕ್ಕೆ ಶೇಕಡಾ ನೂರರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಬೇಕೆಂದು ಭಾರತ ಸರಕಾರ ನಿರ್ಧರಿಸಿದ ಬಳಿಕ, ಮೊದಲು ಬರುತ್ತಿರುವುದು ಖತಾರ್ ಏರ್‌ವೇಸ್. ಭಾರತ ಸರಕಾರ ದೇಶೀಯ ವಿಮಾನಯಾನ ಸಂಸ್ಥೆಗಳನ್ನು ಆರಂಭಿಸಲು ಎಫ್‌ಡಿಐಗಳಿಗೆ ಅನುಮತಿ ನೀಡಿದ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಕರ್ ತಿಳಿಸಿದ್ದಾರೆ.
ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ವಿದೇಶಿ ವಿಮಾನಯಾನ ಕಂಪೆನಿಗಳು ಇತರೆ ಸಂಸ್ಥೆಗಳ ಜತೆ ಕೈಜೋಡಿಸಿ ಶೇ.100ರಷ್ಟು ಬಂಡವಾಳ ಹೂಡಬಹುದೆಂದು ಇತ್ತೀಚೆಗೆ ನಿಯಮಗಳನ್ನು ಸಡಿಲಿಸಿದ ಕಾರಣ, ಖತಾರ್ ಈ ನಿರ್ಧಾರ ಕೈಗೊಂಡಿದೆ. ಆದರೆ ವಿಮಾನಯಾನ ಸಂಸ್ಥೆ ನಿರ್ವಾಹಕರು ಪರವಾನಗಿ ನಿಯಮಗಳನ್ನು ಸಡಿಲಿಸಬೇಕಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.