ನವದೆಹಲಿ:ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ ಜುಲೈ 12ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಲು ನಿರ್ಧರಿಸಿವೆ.
ಪೆಟ್ರೋಲ್ ಪಂಪ್ಗಳಲ್ಲಿ ಶೇ.100ರಷ್ಟು ಆಟೋಮೇಟೆಡ್ ಸಿಸ್ಟಂ ಸ್ಥಾಪಿಸುವಲ್ಲಿ ಮತ್ತು ಪ್ರತಿದಿನ ದರ ಪರಿಷ್ಕರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ತೈಲ ಮಾರಾಟ ಕಂಪನಿಗಳು ವಿಫಲವಾಗಿರುವುದನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಇನ್ನು ದೇಶಾದ್ಯಂತ ಪೆಟ್ರೋಲ್ ಬಂಕ್ ಗಳು ಜುಲೈ 5ರಂದು ಖರೀದಿ ಸ್ಥಗಿತ ಆಚರಣೆ ಮಾಡಲಿದ್ದು, ಬಳಿಕ ಜುಲೈ 12ರಂದು ಪೆಟ್ರೋಲ್ ಬಂಕ್ ಸಂಪೂರ್ಣ ಬಂದ್ ಆಚರಿಸಲಿವೆ ಎಂದು ಅಖಿಲ ಭಾರತ ಪೆಟ್ರೋಲ್ ವ್ಯಾಪಾರಿಗಳ ಸಂಘ (ಎಐಪಿಡಿಎ) ತಿಳಿಸಿದೆ.