Webdunia - Bharat's app for daily news and videos

Install App

ಪೇಟಿಎಂ ನಿಂದ ಪೇಮೆಂಟ್ಸ್ ಬ್ಯಾಂಕ್ ಆರಂಭ

Webdunia
ಮಂಗಳವಾರ, 23 ಮೇ 2017 (13:09 IST)
ನವದೆಹಲಿ:ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸಿದ್ದು, ಠೇವಣಿ ಮೇಲೆ ವಾರ್ಷಿಕ ಶೇ.4 ರಷ್ಟು ಬಡ್ಡಿ ನೀಡುವುದು ಹಾಗೂ ಕ್ಯಾಶ್ ಬ್ಯಾಕ್ ಆಫರ್, ಉಚಿತ ಆನ್ ಲೈನ್ ವಹಿವಾಟು ಸೇರಿದಂತೆ ಆಕರ್ಷಕ ಸೌಲಭ್ಯಗಳನ್ನು ಘೋಷಿಸಿದೆ. 
 
ಪೇಮೆಂಟ್ಸ್ ಬ್ಯಾಂಕ್​ಗಾಗಿ ಪೇಟಿಎಂ 400 ಕೋಟಿ ರೂ. ಗಳನ್ನು ಹೂಡಿಕೆ ಮಾಡುತ್ತಿದೆ. ಮೊದಲ ಶಾಖೆ ನೋಯಿಡಾದಲ್ಲಿ ಉದ್ಘಾಟನೆಯಾಗಿದ್ದು, ಮುಂದಿನ ಒಂದು ವರ್ಷದಲ್ಲಿ 31 ಶಾಖೆಗಳು ಮತ್ತು 3000 ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದೆ. 
 
ಕಳೆದ 48 ಗಂಟೆಗಳಲ್ಲಿ ಪೇಟಿಎಂ ತನ್ನ 2 ಕೋಟಿ 20 ಲಕ್ಷ ಗ್ರಾಹಕರಿಗೆ ಸಂದೇಶ ಕಳುಹಿಸಿದ್ದು, ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಖಾತೆ ತೆರೆಯುವಂತೆ ಮನವಿ ಮಾಡಿದೆ. ಹೊಸ ವಿಧದ ಬ್ಯಾಂಕಿಂಗ್ ಮಾದರಿಯನ್ನು ಆರಂಭಿಸಲು ಆರ್​ಬಿಐ ನಮಗೆ ಅವಕಾಶ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಇಡಲಾಗುವ ಠೇವಣಿ ಹಣವನ್ನು ಸರ್ಕಾರಿ ಬಾಂಡ್​ಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ತಿಳಿಸಿದ್ದಾರೆ.
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments