ನವದೆಹಲಿ: ಚೀನಾ ಮೂಲದ ಮೊಬೈಲ್ ಸಂಸ್ಥೆ ಪಂಜಾಬ್ ನ ಕಚೇರಿಯಲ್ಲಿ ಚೀನಾ ಅಧಿಕಾರಿಗಳು ಭಾರತೀಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರೆಂದು ವರದಿಯಾಗಿತ್ತು. ಇಷ್ಟೆಲ್ಲಾ ರದ್ದಾಂತವಾಗಿದ್ದು ಸಂವಹನ ಸಮಸ್ಯೆಯಿಂದ ಎಂದು ಒಪ್ಪೊ ಸಂಸ್ಥೆ ಹೇಳಿಕೊಂಡಿದೆ.
ಫೇಸ್ ಬುಕ್ ನಲ್ಲಿ ಚೀನಾ ಅಧಿಕಾರಿಯೊಬ್ಬರು ಭಾರತೀಯರು ಭಿಕ್ಷುಕರು ಎಂದು ಕಾಮೆಂಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಪಂಜಾಬ್ ವಿಭಾಗದ ಕಚೇರಿಯಲ್ಲಿ ಸರ್ವಿಸ್ ಮ್ಯಾನೇಜರ್ ಮೇಲೆ ಚೀನಾ ಮೂಲದ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದಲ್ಲದೆ, ವೇತನ ಹೆಚ್ಚಳಕ್ಕಾಗಿ ಬೇಡಿಕೆಯಿಟ್ಟಿದ್ದಕ್ಕೆ ಭಾರತೀಯರಿಗೆ ಹಣದ ದುರಾಸೆ ಎಂದಿದ್ದರು ಎಂದು ವರದಿಯಾಗಿತ್ತು.
ಈ ಹಿನ್ನಲೆಯಲ್ಲಿ ಆ ವಿಭಾಗದ ಕಚೇರಿಯ ಎಲ್ಲಾ ನೌಕರರು ಸಾಮೂಹಿಕವಾಗಿ ರಾಜೀನಾಮೆ ಪತ್ರ ನೀಡಿದ್ದರು. ಇದೀಗ ಪ್ರಮಾದ ಅರಿತ ಸಂಸ್ಥೆ ಇದೆಲ್ಲಾ ಸಂವಹನ ಕೊರತೆಯಿಂದ ಉಂಟಾದ ಸಮಸ್ಯೆ ಎಂದು ತಿಪ್ಪೆ ಸಾರಿದೆ. ಅಲ್ಲದೆ, ಪಂಜಾಬ್ ಸರ್ವಿಸ್ ಮ್ಯಾನೇಜರ್ ಕೂಡಾ ನಾವ್ಯಾರೂ ಕೆಲಸ ಬಿಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.