ಭಾರತದ ಮಾರುಕಟ್ಟೆಯಲ್ಲಿ ಚೀನಾ ಮೂಲಕ ಶಿಯೋಮಿ ಕಂಪನಿ ಹೊಸ ದಾಖಲೆ ನಿರ್ಮಿಸಿದೆ. 2016ರಲ್ಲಿ ಸುಮಾರು ನೂರು ಕೋಟಿ ಡಾಲರ್ (ಸುಮಾರು 7 ಸಾವಿರ ಕೋಟಿ ರೂಪಾಯಿ) ವಹಿವಾಟು ಮಾಡಿದೆ. ಭಾರತದ ಮಾರುಕಟ್ಟೆಗೆ ಅಡಿಯಿಟ್ಟ ಕೇವಲ ಎರಡು ವರ್ಷಗಳಲ್ಲೇ ಈ ವಿಕ್ರಮವನ್ನು ಕಂಪನಿ ಸಾಧಿಸಿರುವುದು ಗಮನಾರ್ಹ ಸಂಗತಿ.
ಇನ್ನೊಂದು ಕಡೆ ಮೊಬೈಲ್ ಮಾರಾಟ ಪಾಲಿನಲ್ಲಿ ಶೇ.7.4ರಷ್ಟಿದ್ದು ನಾಲ್ಕನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಮೈಕ್ರೋಮ್ಯಾಕ್ಸ್‌ಗಿಂತ ಇದು ಶೇ.0.1ರಷ್ಟು ಕಡಿಮೆ. 2016ರಲ್ಲಿ ಶಿಯೋಮಿ ಇಷ್ಟೆಲ್ಲಾ ಮಾರಾಟ ದಾಖಲೆ ಮಾಡಲು ರೆಡ್ ಮಿ ನೋಟ್ 3 ಸಹ ಪ್ರಮುಖ ಕಾರಣ. ಇದುವರೆಗೂ 2.3 ದಶಲಕ್ಷ ಮೊಬೈಲ್‍ಗಳನ್ನು ಕಂಪನಿ ಮಾರಾಟ ಮಾಡಿದೆ.
ಆಲ್‌ಲೈನ್ ಮಾರಾಟದ ಜೊತೆಗೆ ಆಫ್‌ಲೈನ್ ಮಾರಾಟದಲ್ಲೂ ಶಿಯೋಮಿ ಹಿಡಿತ ಸಾಧಿಸಲು ಹೊರಟಿದೆ. ತಮ್ಮ ಬ್ರಾಂಡನ್ನು ಇಷ್ಟಪಡುತ್ತಿರುವುದಕ್ಕೆ ಶಿಯೋಮಿ ಇಂಡಿಯಾ ಮುಖ್ಯಸ್ಥ ಮನು ಜೈನ್ ಗ್ರಾಹಕರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಮುಂಬರುವ ವರ್ಷದಲ್ಲಿ ಇನ್ನಷ್ಟು ವೃದ್ಧಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.