ಕೇಂದ್ರ ಸರಕಾರದ ನೀತಿಗಳನ್ನು ವಿರೋಧಿಸಿ ಆಕ್ಟೋಬರ್ 13 ರಂದು ಒಂದು ದಿನ ಪೆಟ್ರೋಲ್ ಬಂಕ್ ಬಂದ್‌ಗೆ ಕರೆ ನೀಡಲಾಗಿದೆ ಎಂದು ಪೆಟ್ರೋಲ್ ಮಾಲೀಕರ ಸಂಘ ತಿಳಿಸಿದೆ.
ಅಖಿಲ ಭಾರತ ಪೆಟ್ರೋಲ್ ಮಾಲೀಕರ ಸಂಘ ಮತ್ತು ರಾಜ್ಯ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಪೆಟ್ರೋಲ್ ಬಂಕ್ ಬಂದ್‌ಗೆ ಕರೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಕೇಂದ್ರ ಸರಕಾರ ಮತ್ತು ಪೆಟ್ರೋಲ್ ಬಂಕ್ ಮಾಲೀಕರ ನಡುವೆ ನಡೆದ ತೈಲ ಕಂಪೆನಿಗಳ ಒಪ್ಪಂದ ಇಲ್ಲಿಯವರೆಗೆ ಜಾರಿಯಾಗಿಲ್ಲ. ಕೂಡಲೇ ಒಪ್ಪಂದಗಳನ್ನು ಜಾರಿಗೊಳಿಸಿ ಪೆಟ್ರೋಲ್ ಮಾಲೀಕರ ಸಂಘ ಒತ್ತಾಯಿಸಿದೆ.
ತೈಲ ಬೆಲೆ ನಿತ್ಯ ಪರಿಷ್ಕರಿಸುವುದರಿಂದ ಡೀಲರ್ ಗಳಿಗೆ ಮತ್ತು ಗ್ರಾಹಕರಿಗೆ ಇಬ್ಬರಿಗೂ ನಷ್ಟವಾಗುತ್ತಿದೆ. ತೈಲ ಬೆಲೆ ನಿತ್ಯ ಪರಿಷ್ಕರಣೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ಆಗ್ರಹಿಸಿದೆ.
ಪೆಟ್ರೋಲ್, ಡೀಸೆಲ್ ಪ್ರತಿನಿತ್ಯದ ದರ ಏರಿಕೆಯಿಂದ ಪೆಟ್ರೋಲ್ ಪಂಪ್ ಮಾಲೀಕರು ಮತ್ತು ಗ್ರಾಹಕರು ಸಂಕಷ್ಟದಲ್ಲಿರುವುದರಿಂದ ಕೂಡಲೇ ಪ್ರತಿನಿತ್ಯದ ದರ ಏರಿಕೆ ಘೋಷಣೆಯನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತೀಯ ಪೆಟ್ರೋಲ್ ಮಾಲೀಕರ ಸಂಘ ಆಗ್ರಹಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.