ವಿಭಿನ್ನವಾದ ಬಳೆಗಳು, ಹೊಸ ವಿನ್ಯಾಸದ ವಸ್ತ್ರಗಳನ್ನು ಫೇಸ್‌ಬುಕ್‌ನಲ್ಲಿ ಮಾರಾಟಕ್ಕಿಡುವುದನ್ನು ನಾವು ನೋಡಿದ್ದೇವೆ. ಇದೀಗ ದೇಶದ ರಾಜಧಾನಿ ದೆಹಲಿಯ ಒಂದು ಖಾಸಗಿ ಫೇಸ್‌ಬುಕ್ ಗ್ರೂಪ್ ಹೆಲಿಕಾಪ್ಟರನ್ನು ಮಾರಟಕ್ಕಿಟ್ಟಿದೆ.
ಫ್ಲಾಟ್ಸ್, ಫ್ಲಾಟ್‌ಮೇಟ್ ಹೆಸರಿನ ಈ ಫೇಸ್‌ಬುಕ್ ಗ್ರೂಪ್ 2009ರ ಮಾಡೆಲ್ ಹೆಲಿಕಾಪ್ಟರ್ ಮಾರಾಟಕ್ಕೆ ಇಟ್ಟಿದೆ. ಇದರ ಬೆಲೆ ರೂ.2.8 ಕೋಟಿ ಎಂದು ಹೇಳಿದೆ. ಆರು ಸೀಟುಗಳುಳ್ಳ ಈ ಹೆಲಿಕಾಪ್ಟರ್, ಗಂಟೆಗೆ 200-300 ಕಿ.ಮೀ ಪ್ರಯಾಣಿಸಲಿದೆ. ಗಂಟೆಗೆ 60 ಲೀಟರ್ ಇಂಧನ ಖರ್ಚಾಗುತ್ತದೆ. ಆಸಕ್ತಿಯುಳ್ಳವರು ಫೇಸ್‌ಬುಕ್ ಮೂಲಕ ತಮ್ಮ ಇನ್‌ಬಾಕ್ಸ್‌ನಲ್ಲಿ ನೋಂದಾಯಿಸಿಕೊಳ್ಳಬಹುದೆಂದು ಮಾರಾಟಗಾರರು ಕೋರಿದ್ದಾರೆ.
ಸಾಮಾಜಿಕ ಮಾಧ್ಯಮವಾಗಿ ಹೆಚ್ಚು ಜನಪ್ರಿಯವಾದ ಫೇಸ್‌ಬುಕ್, ಗ್ರಾಹಕರನ್ನು, ಮಾರಾಟಗಾರರನ್ನು ಬೆಸೆಯಲು ಮಾರ್ಕೆಟ್ ಪ್ಲೇಸನ್ನು ಇತ್ತೀಚೆಗೆ ಪರಿಚಯಿಸಿದ. ಬಹಳಷ್ಟು ಮಂದಿಗೆ ಈ ಪೇಜ್ ವಿವರಗಳು ಗೊತ್ತಿಲ್ಲದಿದ್ದರೂ, ಫೇಸ್‌ಬುಕ್ ಮೂಲಕ ಈಗಾಗಲೆ ಮಾರಾಟ ನಡೆಯುತ್ತಿದೆ.
ಗುರಗಾಂವ್‍ನ ಸ್ಥಳೀಯರು ಫ್ಲಾಟ್ಸ್ ಅಂಡ್ ಫ್ಲಾಟ್‌ಮೇಟ್ ಫೇಸ್‍ಬುಕ್ ಗ್ರೂಪನ್ನು ಆರಂಭಿಸಿದ್ದಾರೆ. ಯಾವುದೇ ಬ್ರೋಕರೇಜ್ ಇಲ್ಲದಂತೆ ಫ್ಲಾಟ್ಸನ್ನು ಬಾಡಿಗೆಗೆ ಕೊಡಲು, ತೆಗೆದುಕೊಳ್ಳಲು ಈ ಪೇಜ್ ಸಹಕರಿಸುತ್ತದೆ ಎಂದು ಗ್ರೂಪ್ ಮಾಲೀಕ ಹೇಳಿದ್ದಾನೆ. ಈ ಗ್ರೂಪ್ ನಲ್ಲಿ ಈಗಾಗಲೆ 65,131 ಮಂದಿ ಸದಸ್ಯರಿದ್ದಾರೆ. ಫ್ಲಾಟ್‌ಗಳನ್ನು ಬಾಡಿಗೆಗೆ ಕೊಡುವ ಈ ಗ್ರೂಪ್‌ನಲ್ಲಿ ಹೆಲಿಕಾಪ್ಟರ್ ಮಾರಟಕ್ಕಿಟ್ಟಿರುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.