ಬೆಂಗಳೂರು : ಗೂಗಲ್ ನಲ್ಲಿ ಎಲ್ಲಾ ವಿಧದ ಆಹಾರಗಳನ್ನು ಸರ್ಚ್ ಮಾಡಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಗೂಗಲ್ ನಲ್ಲಿ ಗ್ರಾಹಕರು ತಮ್ಮಿಷ್ಟದ ಆಹಾರವನ್ನು ಆರ್ಡರ್ ಕೂಡ ಮಾಡಬಹುದಾಗಿದೆ.
ಹೌದು. ಗೂಗಲ್ ತನ್ನ ಬಳಕೆದಾರರಿಗೆ ಫುಡ್ ಆರ್ಡರ್ ಮಾಡುವ ಹೊಸ ಆಯ್ಕೆಯೊಂದನ್ನು ಪರಿಚಯಿಸುತ್ತಿದ್ದು, ಗ್ರಾಹಕರು ತಮ್ಮಿಷ್ಟದ ಆಹಾರವನ್ನು ಸರ್ಚ್ ಇಂಜಿನ್ ಮತ್ತು ಗೂಗಲ್ ಮ್ಯಾಪ್ನಿಂದ ಆರ್ಡರ್ ಮಾಡ ಬಹುದಾಗಿದೆ. ಗೂಗಲ್ ಸರ್ಚ್ ಇಂಜಿನ್ನಲ್ಲೇ ‘ಆರ್ಡರ್ ಆನ್ಲೈನ್‘ ಬಟನ್ ಆಯ್ಕೆಯನ್ನು ನೀಡಿದ್ದು, ಇದರ ಮೂಲಕ ಫುಡ್ ಆರ್ಡರ್ ಮಾಡಬಹುದಾಗಿದೆ.
ಫುಡ್ ಡೆಲಿವರಿಗಾಗಿ ಎರಡು ಆಯ್ಕೆಗಳು ಇರಲಿದ್ದು, ಗ್ರಾಹಕರು ರೆಸ್ಟೊರೆಂಟ್ ಮೂಲಕ ಫುಡ್ ಸ್ವೀಕರಿಸಬಹುದು ಅಥವಾ ಹೋಮ್ ಡೆಮಿವರಿ ಮೂಲಕ ಆರ್ಡರ್ ಮಾಡಬಹುದಾಗಿದೆ. ಇದಕ್ಕಾಗಿ ಕಂಪೆನಿ ಹೋಮ್ ಡೆಲಿವರಿ ಪಾಟ್ನರ್ಸ್ಗಳ ಸಹಯೋಗದೊಂದಿದೆ ಕಾರ್ಯನಿರ್ವಹಿಸಲು ಮುಂದಾಗಿದೆ. ಗೂಗಲ್ ಸಂಸ್ಥೆ ಈ ಹೊಸ ಸೇವೆಯನ್ನು ಯುಎಸ್ ನಲ್ಲಿ ಆರಂಭಿಸಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಈ ಸೌಲಭ್ಯವನ್ನು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.