ಬೆಂಗಳೂರು : ಮೊಬೈಲ್ ನ್ನು ಅತಿಯಾಗಿ ಬಳಸುವುದರಿಂದ ಅದರ ಬ್ಯಾಟರಿ ಚಾರ್ಜ್ ಹೆಚ್ಚು ಸಮಯ ಬರುವುದಿಲ್ಲ. ಇದರಿಂದ ಪದೇ ಪದೇ ಮೊಬೈಲ್ ಚಾರ್ಜ್ ಗೆ ಹಾಕಬೇಕಾಗುತ್ತದೆ. ಹೊರಗಡೆ ಹೋದಾಗ ಮೊಬೈಲ್ ಚಾರ್ಜ್ ಮಾಡಲು ಆಗುವುದಿಲ್ಲ. ಅದಕ್ಕಾಗಿ ಸಂಶೋಧಕರು ಬ್ಯಾಟರಿಯಿಲ್ಲದ ಮೊಬೈಲ್ ಫೋನ್ ವೊಂದನ್ನು ಕಂಡುಹಿಡಿದಿದ್ದಾರೆ.
ಯುನಿವರ್ಸಿಟಿ ಆಫ್ ವಾಷಿಂಗ್ಟನ್ ಸಂಶೋಧಕರು ವಿದ್ಯುತ್ ಶಕ್ತಿಗೆ ಬದಲಾಗಿ ರೇಡಿಯೋ ಸಿಗ್ನಲ್, ಬೆಳಕಿಗೆ ಅಗತ್ಯವಿರುವ ಮೈಕ್ರೋವ್ಯಾಟ್ಗಳನ್ನು ಬಳಸಿಕೊಂಡು ಬ್ಯಾಟರಿ ರಹಿತವಾದ ಫೋನ್ ಅನ್ನು ಕಂಡುಹಿಡಿದಿದ್ದಾರೆ. ಹಾಗೇಯೇ ಸಂಶೋಧಕರು ಈ ಫೋನ್ನಿಂದ ಸ್ಕೈಪ್ ಕರೆಗಳನ್ನು ಮಾಡಿ ಸಫಲರಾಗಿದ್ದಾರೆ.
ಇನ್ನು ಪ್ರಕೃತಿದತ್ತವಾದ ಶಕ್ತಿಯನ್ನು ಉಪಯೋಗಿಸಿ ಬಳಸಬಹುದಾದ ಬ್ಯಾಟರಿ ರಹಿತ ಫೋನಿನ ವಿನ್ಯಾಸದ ಕುರಿತು ಸಂಶೋಧನ ತಂಡ ಮಿಮರ್ಶಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಸಜ್ಜುಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.