ಕೇಂದ್ರ ಸರಕಾರದ ಮಹತ್ವದ ಅಚ್ಚು ಮೆಚ್ಚಿನ ಯೋಜನೆಯಾದ ಆಧಾರ ಪೇಮೆಂಟ್ ಆ್ಯಪ್ ಕ್ರಿಸ್‌ಮಸ್ ಹಬ್ಬದ ದಿನದಂದು ಅಂದರೆ ಡಿಸೆಂಬರ್ 25 ರಂದು ಲಾಂಚ್ ಮಾಡಲಾಗುತ್ತಿದೆ.
ಕ್ಯಾಶ್‌ಲೆಸ್ ಸಮಾಜಕ್ಕಾಗಿ ಅಗತ್ಯವಾಗಿರುವ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬದಲಿಗೆ ಆಧಾರ ಪೇಮೆಂಟ್ ಆಪ್ ಸುಲಭವಾಗಿ ಬಳಸಿ ಹಣದ ವಹಿವಾಟು ನಡೆಸಬಹುದಾಗಿದೆ.
ಆಧಾರ ಪೇಮೆಂಟ್ ಆ್ಯಪ್ ಜಾರಿಗೆ ಬಂದ ನಂತರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಸೇವಾ ಕಂಪೆನಿಗಳಾದ ಮಾಸ್ಟರ್‌ಕಾರ್ಡ್ ಅಥವಾ ವೀಸಾ ಕಾರ್ಡ್ ಹಣದ ಪಾವತಿಗೆ ಶುಲ್ಕ ವಿಧಿಸುತ್ತಿರುವುದಕ್ಕೆ ಹಿನ್ನೆಡೆಯಾಗಲಿದೆ.
ಆಧಾರ ಪೇಮೆಂಟ್ ಆ್ಯಪ್ ಗ್ರಾಮಗಳಲ್ಲಿ ವಹಿವಾಟು ನಡೆಸುವ ವರ್ತಕರಿಗೆ ತುಂಬಾ ಉಪಯೋಗವಾಗಲಿದೆ. ಆಂಡ್ರೈಡ್ ಫೋನ್‌ನಲ್ಲಿ ಉಚಿತವಾಗಿ ಆಪ್ ಡೌನ್‌ಲೋಡ್ ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.
ವರ್ತಕರು 2000 ಬೆಲೆಬಾಳುವ ಬೈಯೋಮೆಟ್ರಿಕ್ ರೀಡರ್‌ನೊಂದಿಗೆ ಸಂಪರ್ಕವಿರುವ ಸ್ಮಾರ್ಟ್‌ಫೋನ್‌ನಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ನಂತರ ಆಧಾರ ಕಾರ್ಡ್ ಸಂಖ್ಯೆಯನ್ನು ಆ್ಯಪ್‌ನಲ್ಲಿ ದಾಖಲಿಸಬೇಕು.
ತದನಂತರ ಖಾತೆಯನ್ನು ಹೊಂದಿರುವ ಬ್ಯಾಂಕ್ ಆಯ್ಕೆ ಮಾಡಬೇಕಾಗಿದೆ. ಈ ಸಂದರ್ಭದಲ್ಲಿ ಬೈಯೋಮೆಟ್ರಿಕ್ ಪಾಸ್‌ವರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಸುಲಭವಾಗಿ ಹಣದ ವಹಿವಾಟು ನಡೆಸಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.