ಫ್ಯಾಷನ್ ಇ-ಕಾಮರ್ಸ್ ವೇದಿಕೆ ಮಿಂತ್ರಾ ಹೊಸ ವರ್ಷದ ಗ್ರ್ಯಾಂಡ್ ಸೇಲ್‍ಗೆ ಸಜ್ಜಾಗಿದೆ. 2017ರ ಜನವರಿರ್ 3-5ರವರೆಗೆ ಎಂಡ್ ಆಫ್ ರೀಜನ್ ಮಾರಾಟವನ್ನು ಮಾಡುತ್ತಿರುವುದಾಗಿ ಮಿಂತ್ರಾ ಹೇಳಿದೆ. ಈ ಮಾರಾಟದಿಂದ ತಮ್ಮ ವಹಿವಾಟನ್ನು ಶೇ.25ರಷ್ಟು ಹೆಚ್ಚಿಸಿಕೊಳ್ಳುವ ಉದ್ದೇಶ ಇದೆ ಎಂದಿದೆ.
ವರ್ಷಕ್ಕೆ ಎರಡು ಸಲ ನಿರ್ವಹಿಸುವ ಈ ಮಾರಾಟದಲ್ಲಿ 1,800 ಬ್ರಾಂಡ್‍ಗಳಿಗೆ ಶೇ.50-80ರವರೆಗೆ ರಿಯಾಯಿತಿ ನೀಡಲಾಗುತ್ತದೆ ಎಂದು ಮಿಂತ್ರಾ ತಿಳಿಸಿದೆ. ಡಿಜಿಟಲ್ ಪಾವತಿಗೆ ಇನ್ನಷ್ಟು ರಿಯಾಯಿತಿ ಕೊಡುವುದಾಗಿ ಪ್ರಕಟಿಸಿದೆ. ಅಧಿಕ ಮೌಲ್ಯದ ನೋಟು ರದ್ದಾದ ಮೇಲೆ ಮಾರುಕಟ್ಟೆ ಮೇಲೆ ಆದ ವ್ಯತಿರಿಕ್ತ ಪರಿಣಾಗಳಿಂದ ಹೊರಬರಲು ಈ ಮಾರಾಟದಿಂದ ಸಾಧ್ಯವಾಗಲಿದೆ ಎಂದು ಮಿಂತ್ರಾ ಅಭಿಪ್ರಾಯಪಟ್ಟಿದೆ.
ಇದರ ಮಾತೃಸಂಸ್ಥೆ ಫ್ಲಿಪ್‍ಕಾರ್ಟ್‌ಗೂ ಈ ಮಾರಾಟದಿಂದ ಲಾಭವಾಗಲಿದೆ. ನೋಟು ಅಪಮೌಲ್ಯದ ಬಳಿಕ ಫ್ಲಿಪ್‍ಕಾರ್ಟ್ ಬೆಳವಣಿಗೆ ಅಂಶ ಶೇ.50ರಷ್ಟು ಕುಸಿತ ಕಂಡಿತ್ತು. ಸಾಮಾನ್ಯ ಮಾರಾಟಕ್ಕಿಂತ ಎಂಡ್ ಆಫ್ ರೀಜನ್ ಸೇಲ್ ಮೂಲಕ ಸುಮಾರು ಶೇ.25ರಷ್ಟು ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತೇವೆ. 2016ಕ್ಕಿಂತ ಎರಡು ಪಟ್ಟು ದಾಖಲಿಸುವುದಾಗಿ ಮಿಂತ್ರಾ ಕಾರ್ಯನಿರ್ವಾಹಕ ಅಧಿಕಾರಿ ಅನಂತ್ ನಾರಾಯಣ್ ತಿಳಿಸಿದ್ದಾರೆ. ಈ ಮೂರು ದಿನಗಳಲ್ಲಿ 15 ದಶಕಲಕ್ಷ ಗ್ರಾಹಕರು ನೋಂದಾಯಿಸಿಕೊಳ್ಳುತ್ತಾರೆಂದು. ಸುಮಾರು 5-6 ಲಕ್ಷ ಹೊಸ ಗ್ರಾಹಕರು ನೋಂದಣಿ ಮಾಡಿಕೊಳ್ಳುತ್ತಾರೆಂದು ಕಂಪನಿ ಆಶಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.