ಪ್ರಮುಖ ಎಲೆಕ್ಟ್ರಾನಿಕ್ ಉತ್ಪನ್ನಗಳ ಕಂಪೆನಿ ಎಲ್‌ಜಿ 5.7 ಇಂಚಿನ ಸ್ಪರ್ಶ ಸಂವೇದಿ ಪರದೆಯ ಜಿ6 ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿ6ನ್ನು ಬಿಡುಗಡೆ ಮಾಡಿದೆ.
ಈ ಸಂದರ್ಭದಲ್ಲಿ ಎಲ್‌ಜಿ ಎಲೆಕ್ಟ್ರಾನಿಕ್ ಮೊಬೈಲ್ ಕಮ್ಯುನಿಕೇಷನ್ಸ್ ಅಧ್ಯಕ್ಷ ಜುನೋ ಚೋ ಮಾತನಾಡುತ್ತಾ, ಇಂದಿನ ಸ್ಮಾರ್ಟ್‌ಫೋನ್ ಸಮರದಲ್ಲಿ ವಿಶೇಷತೆಗಳಿಗಿಂತ ಬಳಕೆಯ ಮೇಲೆ ಹೆಚ್ಚು ದೃಷ್ಟಿ ಹರಿಸಿರುವುದಾಗಿ ತಿಳಿಸಿದ್ದಾರೆ. ಎಲ್‌ಜಿ ಯೂಎಕ್ಸ್ 6.0ದೊಂದಿಗೆ ಬಿಡುಗಡೆ ಮಾಡಿರುವ ಮೊದಲ ಸ್ಮಾರ್ಟ್‍ಫೋನ್ ಆಗಿದೆ.
ಎಲ್‌ಜಿ ವಿಶೇಷತೆಗಳು
* 5.7 ಇಂಚಿನ ಸ್ಪರ್ಶಸಂವೇದಿ ಪರದೆ
* 4 ಜಿಬಿ ರ‍್ಯಾಮ್
* 32 ಮೆಗಾ ಪಿಕ್ಸೆಲ್ ಆಂತರಿಕ ಮೆಮೊರಿ
* 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 7.0 ನೂಗಟ್
* 3300 ಎಂಎಎಚ್ ಬ್ಯಾಟರಿ ಸಾಮರ್ಥ್ಯ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.