ವಿವಾಹಿತ ಮಹಿಳೆಯರು 500 ಗ್ರಾಂ, ಅವಿವಾಹಿತ ಯುವತಿಯರು 250 ಗ್ರಾಂ ಚಿನ್ನ ಮತ್ತು ಪುರುಷ 100 ಗ್ರಾಂ ಚಿನ್ನ ಹೊಂದಿರುವುದಕ್ಕೆ ತೆರಿಗೆಯಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ.
ನೋಟು ನಿಷೇಧದ ಭೂತ ಮಾಯವಾಗುವ ಮುಂಚೆ ಕಪ್ಪು ಹಣ ಹೊಂದಿದವರು ಚಿನ್ನ ಖರೀದಿಸದಂತೆ ತಡೆಯೊಡ್ಡಲು ಇಲಾಖೆ ಹರಸಾಹಸ ಪಡುತ್ತಿದೆ.
ಕೆಲ ತಿಂಗಳುಗಳ ಹಿಂದೆ ಚಿನ್ನ ಖರೀದಿಗೆ ಯಾವುದೇ ತೆರಿಗೆಯಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಕೇಂದ್ರ ಹಣಕಾಸು ಸಚಿವಾಲಯ, ಇದೀಗ ಚಿನ್ನ ಖರೀದಿಗೆ ಕಡಿವಾಣ ಹಾಕಲು ನಿರ್ಧರಿಸಿದೆ. ವಿವಾಹಿತ ಮಹಿಳೆಯರು 500 ಗ್ರಾಂ, ಅವಿವಾಹಿತ ಮಹಿಳೆಯರು 250 ಗ್ರಾಂ ಹಾಗೂ ಪುರುಷರು 100 ಗ್ರಾಂ ಚಿನ್ನವನ್ನು ಮಾತ್ರ ಇಟ್ಟುಕೊಳ್ಳುವ ಅವಕಾಶ ನೀಡಿದೆ.
ಪೋಷಕರು ಉಡುಗೊರೆಯಾಗಿ ನೀಡಿದ ಚಿನ್ನದ ಉಡುಗೊರೆಗೆ ಯಾವುದೇ ತೆರಿಗೆಯಿಲ್ಲ ಎಂದು ಸ್ಪಷ್ಟಪಡಿಸಿದ ಸರಕಾರ ಮಿತಿಗಿಂತಲು ಹೆಚ್ಚಿನ ಚಿನ್ನಕ್ಕೆ ತೆರಿಗೆ ಪಾವತಿಸುವಂತೆ ತಾಕೀತು ಮಾಡಿದೆ.
ನೋಟು ನಿಷೇಧದಿಂದಾಗಿ ಕಪ್ಪು ಹಣ ಹೊಂದಿದವರು ಚಿನ್ನವನ್ನು ಖರೀದಿಸಲು ಮುಗಿಬಿದ್ದಿದ್ದಾರೆ ಎನ್ನುವ ವರದಿಗಳು ಬಹಿರಂಗವಾಗುತ್ತಿದ್ದಂತೆ, ಎಚ್ಚೆತ್ತ ಕೇಂದ್ರ ಸರಕಾರ ಕಪ್ಪು ಹಣ ಹೊಂದಿದವರಿಗೆ ಬಿಸಿ ಮುಟ್ಟಿಸಲು ಆರಂಭಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.