ಕಂಪ್ಯೂಟರ್ ಬಳಕೆದಾರರಿಗೆ ಅತ್ಯಂತ ಚಿರಪರಿಚಿತ ಆಪರೇಟಿಂಗ್ ಸಿಸ್ಟಂ ವಿಂಡೋಸ್ 7. ಆ ಬಳಿಕ ಬಂದಂತಹ ವಿಂಡೋಸ್ 8.. ವಿಂಡೋಸ್ 10 ಆವೃತ್ತಿಗಳು ಬಂದರೂ ಈಗಲೂ ಬಹಳಷ್ಟು ಮಂದಿ ವಿಂಡೋಸ್ 7ನ್ನೇ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಅದರಲ್ಲಿರುವ ಸುಲಭವಾದ ಆಯ್ಕೆಗಳು.
ಅಷ್ಟೆಲ್ಲಾ ಜನಪ್ರಿಯವಾದ ಆಪರೇಟಿಂಗ್ ಸಿಸ್ಟಂ ಇನ್ನು ಮೂರು ವರ್ಷಗಳಲ್ಲಿ ಗುಡ್‌ಬೈ ಹೇಳಲಿದೆ. ಈ ಸಂಗತಿಯನ್ನು ಸ್ವತಃ ಮೈಕ್ರೋಸಾಫ್ಟ್ ಕಂಪೆನಿ ಪ್ರಕಟಿಸಿದೆ. ಭದ್ರತೆ ವಿಚಾರದಲ್ಲಿ ವಿಂಡೋಸ್ 7 ಅಪಾಯದಲ್ಲಿದೆಯಂತೆ. ಮೂರು ವರ್ಷಗಳಲ್ಲಿ ಸೆಕ್ಯುರಿಟಿ ಬೆಂಬಲ ನಿಲ್ಲಿಸುವುದಾಗಿ ಕಂಪೆನಿ ಹೇಳಿದೆ.
ದಿನದಿಂದ ದಿನಕ್ಕೆ ಮಾಲ್‌ವೇರ್‌ಗಳ ದಾಳಿ ಹೆಚ್ಚುತ್ತಿದೆ. ಅವನ್ನು ಎದುರಿಸಬೇಕಾದರೆ ಗ್ರಾಹಕರಿಗೆ ಯಾವಾಗಲೂ ಓಎಸ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತಾ ಅಪ್‌ಡೇಟ್ ಕಳುಹಿಸಬೇಕಾಗಿರುತ್ತದೆ. ಅದೇ ರೀತಿ ಹೊಸ ಫೀಚರ್‌ಗಳೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಪ್ರಿಂಟರ್..ಕೀಬೋರ್ಡ್..ಸ್ಪೀಕರ್..ಮೌಸ್ ಇನ್ನಿತರೆ ಹಾರ್ಡ್‌ವೇರ್ ಪರಿಕರಗಳನ್ನು ಬೆಂಬಲಿಸಬೇಕಾದರೂ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.
ಮುಖ್ಯವಾಗಿ ಹಾರ್ಡ್‍ವೇರ್ ತಯಾರಕರು ವಿಂಡೋಸ್ 7ಕ್ಕೆ ಸರಿಹೊಂದುವ ಡ್ರೈವರ್ ಸಾಫ್ಟ್‌ವೇರ್‌ಗಳನ್ನು ಕೊಡುತ್ತಿಲ್ಲ. ಹೊಸದಾಗಿ ಬಂದಿರುವ ವಿಂಡೋಸ್ 10ಕ್ಕೆ ಕೊಡುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸುವುದು ಮೈಕ್ರೋಸಾಫ್ಟ್ ಕಂಪೆನಿಗೆ ದೊಡ್ಡ ತಲೆನೋವಾಗಿದೆ. ಹಾಗಾಗಿ ವಿಂಡೋಸ್ 7ಕ್ಕೆ 2020 ಜನವರಿ 13ರಿಂದ ಸೆಕ್ಯುರಿಟಿ ಸಪೋರ್ಟ್ ಸಂಪೂರ್ಣವಾಗಿ ನಿಲ್ಲಿಸುತ್ತಿರುವುದಾಗಿ ಕಂಪೆನಿ ಹೇಳಿದೆ. ಅಷ್ಟರೊಳಗೆ ಬಳಕೆದಾರರು ವಿಂಡೋಸ್ 10ಕ್ಕೆ ಬದಲಾಗಬೇಕೆಂದು ಮೈಕ್ರೋಸಾಫ್ಟ್ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.