ಬಹುರಾಷ್ಟ್ರೀಯ ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ಇನ್ನು ಸ್ವಲ್ಪ ದಿನಗಳಲ್ಲಿ 700 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಿದೆ. ಮುಂದಿನ ವಾರದಲ್ಲಿ ಪ್ರಕಟಿಸಲಿರುವ ಫಲಿತಾಂಶಗಳ ಹಿನ್ನೆಲೆಯಲ್ಲಿ ಉದ್ಯೋಗ ಕಡಿತವನ್ನೂ ಪ್ರಕಟಿಸಲಿದೆ. 2017ರ ಜೂನ್‌ವರೆಗೆ 2,850 ಉದ್ಯೋಗಿಗಳನ್ನು ಕಡಿತ ಮಾಡಲಿರುವುದಾಗಿ ಮೈಕ್ರೋಸಾಫ್ಟ್ ಈಗಾಗಲೆ ಪ್ರಕಟಿಸಿದೆ.
ಈ ಹಿನ್ನೆಲೆಯಲ್ಲಿ ಈ ತಿಂಗಳಲ್ಲೇ 700 ಉದ್ಯೋಗಗಳಿಗೆ ಕಂಪೆನಿ ಗುಡ್‍ಬೈ ಹೇಳಲಿದೆ. 2016ರ ಜೂನ್ 30ರವರೆಗೂ ಮೈಕ್ರೋಸಾಫ್ಟ್‌ನಲ್ಲಿ 1,14,000 ಮಂದಿ ಉದ್ಯೋಗಿಗಳಿದ್ದರು. ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಜನವರಿ 26ರಂದು ಪ್ರಕಟಿಸಲಿದೆ.
ಥಾಮ್ಸನ್ ರಾಯಿಟರ್ಸ್ ಅಂದಾಜಿನ ಪ್ರಕಾರ ಕಂಪೆನಿ 25.27 ಬಿಲಿಯನ್ ಡಾಲರ್ ಆದಾಯವನ್ನು ಗಳಿಸುತ್ತಿದೆ. 2013ರಲ್ಲಿ ನೋಕಿಯಾನು ಕೊಂಡುಕೊಂಡ ಬಳಿಕ ಸ್ಮಾರ್ಟ್‍ಫೋನ್ ಬ್ಯುಸಿನೆಸ್‌ನಲ್ಲಿ ಕೆಲಸ ಮಾಡುತ್ತಿದ್ದ 25 ಸಾವಿರ ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ತೆಗೆದುಹಾಕಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.