ಸಾಮಾನ್ಯವಾಗಿ 3000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಫೋನ್ ಸಂಪೂರ್ಣ ಚಾರ್ಜ್ ಮಾಡಬೇಕಾದರೆ ಎಷ್ಟು ಸಮಯ ಹಿಡಿಸುತ್ತದೆ? ಸುಮಾರು 2 ಗಂಟೆ ಆಗಬಹುದು. ಸೂಕ್ತ ಚಾರ್ಜರ್‌ನೊಂದಿಗೆ, ವೇಗವಾಗಿ ಚಾರ್ಚ್ ಮಾಡಬಹುದಾದ ಫೀಚರ್‌ವುಳ್ಳ ಸ್ಮಾರ್ಟ್‌ಫೋನನ್ನು ತರುತ್ತಿವೆ ಕಂಪೆನಿಗಳು.
ಚೀನಾ ಮೂಲದ ಪ್ರಮುಖ ಫೋನ್ ತಯಾರಿ ಕಂಪೆನಿ ಮಿಜೂ ಹೊಸದಾಗಿ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್ ಕೇವಲ 20 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ವರ್ಲ್ಡ್ ಮೊಬೈಲ್ ಕಾಂಗ್ರೆಸ್ ಸಂದರ್ಭದಲ್ಲಿ ಮಿಜೂ ಈ ಫೋನನ್ನು ಬಿಡುಗಡೆ ಮಾಡಿದೆ.
ಸೂಪರ್ ಎಂ ಚಾರ್ಜ್ ಹೆಸರಿನ ಈ ಫೋನ್ ಐಫೋನ್ 7 ಪ್ಲಸ್‌ಗಿಂತಲೂ 11 ಪಟ್ಟು, ಸ್ಯಾಂಸಂಗ್ ಗ್ಯಾಲಕ್ಸಿ ಎಸ್ 7 ಎಡ್ಜ್‌ಗಿಂತಲೂ 3.6 ಪಟ್ಟು ವೇಗವಾಗಿ ಚಾರ್ಜ್ ಆಗುತ್ತದೆ. ಶೇ.30ರಷ್ಟು ಚಾರ್ಜ್ ಆಗಲು ಈ ಫೋನ್ ತೆಗೆದುಕೊಳ್ಳುವ ಸಮಯ ಕೇವಲ 5 ನಿಮಿಷ. ಸೂಪರ್ ಎಂ ಚಾರ್ಜರ್‌ಗೆ ಹೊಸ ತಂತ್ರಜ್ಞಾನ ಬಳಸಿರುವುದಾಗಿ ಕಂಪೆನಿ ತಿಳಿಸಿದೆ. 2,500 ಎಂಎಎಚ್ ಬ್ಯಾಟರಿ ಕೇವಲ 15 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.