ದೇಶೀಯ ಕಾರು ಉತ್ಪಾದನಾ ಕಂಪನಿ ಮಾರುತಿ ಸುಜುಕಿ ಇಂಡಿಯಾ ರೀಟೇಲ್ ಮಾರಾಟದಲ್ಲಿ ಶೇ.20ರಷ್ಟು ಕಡಿಮೆ ಆಗಿದೆ. ಕಳೆದ ವರ್ಷ ಅಕ್ಟೋಬರ್-ನವೆಂಬರ್ ನಡುವಿನ ಕಾಲಕ್ಕೆ ಹೋಲಿಸಿದರೆ ಈ ವರ್ಷ ಮತ್ತಷ್ಟು ಕುಸಿತ ಆಗಿದೆ ಎಂದು ಕಂಪನಿ ಮೂಲಗಲು ತಿಳಿಸಿವೆ.
ಆದರೆ ಆಶಾದಾಯಕ ವಿಷಯ ಏನೆಂದರೆ ಈ ತಿಂಗಳಲ್ಲಿ ಬುಕ್ಕಿಂಗ್ ಶೇ.7ರಷ್ಟು ದಾಖಲಾಗಿದೆ ಎಂದಿದೆ. ಅಧಿಕ ಮೌಲ್ಯದ ನೋಟು ರದ್ದಾದ ಕಾರಣ ನವೆಂಬರ್ ತಿಂಗಳಲಿ ಕಾರುಗಳ ಬುಕ್ಕಿಂಗ್ ಕಡಿಮೆ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.20ರಷ್ಟು ಕಡಿಮೆಯಾಗಿದೆ.
ಈ ಬೆಳವಣಿಗೆಗೆ ಕಾರಣ ದಿಢೀರ್ ಎಂದು ಬಂದ ನೋಟು ನಿಷೇಧ ಪ್ರಕಟಣೆ. ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು ಈ ತಿಂಗಳಲ್ಲಿ ಶೇ.7ರಷ್ಟು ಬುಕ್ಕಿಂಗ್ ದಾಖಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಅಧ್ಯಕ್ಷ ಆರ್.ಸಿ ಭಾರ್ಗವ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.