ಪ್ರಸಕ್ತ ವರ್ಷಾಂತ್ಯಕ್ಕೆ ಸಬ್ಸಿಡಿಯನ್ನು ಅಂತ್ಯಗೊಳಿಸಲು ಪ್ರತಿ ತಿಂಗಳು ಅಡುಗೆ ಅನಿಲ ದರ ಏರಿಸುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರಕಾರ, ಸಬ್ಸಿಡಿ ಸಹಿತ ಅಡುಗೆ ಸಿಲಿಂಡರ್ ದರದಲ್ಲಿ 7 ರೂಪಾಯಿ ಹೆಚ್ಚಳಗೊಳಿಸಿದೆ.
ಸಬ್ಸಿಡಿ ಸಹಿತ 14.2 ಕೆ.ಜಿ ಎಲ್‌ಪಿಜಿ ಸಿಲಿಂಡರ್ ಕಳೆದ ತಿಂಗಳು ದೆಹಲಿಯಲ್ಲಿ 479.77 ರೂ.ಗಳಿಗೆ ದೊರೆಯುತ್ತಿತ್ತು. ಇದೀಗ 487.18 ರೂಪಾಯಿಗಳಿಗೆ ದೊರೆಯಲಿದೆ ಎಂದು ಐಓಸಿ ತಿಳಿಸಿದೆ.
ಕಳೆದ ಜುಲೈ 31 ರಂದು ಲೋಕಸಭೆಯಲ್ಲಿ ದರ ಏರಿಕೆ ಪ್ರಸ್ತಾಪಿಸಿದ್ದ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಸಿಲಿಂಡರ್ ದರದಲ್ಲಿ 4 ರೂಪಾಯಿ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. ಆದರೆ, ಇದೀಗ ಸಿಲಿಂಡರ್ ದರದಲ್ಲಿ 7 ರೂಪಾಯಿಗಳಿಗೆ ಹೆಚ್ಚಳವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.