ಉದ್ಯೋಗ ನೇಮಕಾತಿ ವರ್ಷದ ಮೊದಲರ್ಧದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನಡೆಯಲಿವೆ. ಇದರಲ್ಲಿ ಐಟಿ ಕ್ಷೇತ್ರ ಮುಖ್ಯವಾದದ್ದು. ಈ ಸಲ ಮಾರ್ಚ್ ವರೆಗೂ ಐಟಿ ನೇಮಕಾತಿಗಳು ಹೆಚ್ಚಾಗಿ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.
ಐಟಿ ಕ್ಷೇತ್ರದಲ್ಲಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದೀರಾ...ಇಲ್ಲಿದೆ ನೋಡಿ ಶುಭವಾರ್ತೆ. ಈ ವರ್ಷ ಡಿಸೆಂಬರ್‌ನಿಂದ ಮುಂದಿನ ವರ್ಷದ ಮಾರ್ಚ್ ವರೆಗೆ ಅತ್ಯಧಿಕ ಸಂಖ್ಯೆಯಲ್ಲಿ ಉದ್ಯೋಗವಕಾಶ ಕಲ್ಪಿಸಲು ದೇಶದ ಐಟಿ ಸಂಸ್ಥೆಗಳು ಮುಂದಾಗಿವೆ ಎಂದು ಎಕ್ಸ್‌ಪೆರೀಸ್ ಐಟಿ-ಮ್ಯಾನ್‌ಪವರ್ ಗ್ರೂಪ್ ಇಂಡಿಯಾ ಸಮೀಕ್ಷೆ ತಿಳಿಸಿದೆ.
ಶೇ. 76ರಷ್ಟು ಕಂಪನಿಗಳು ನೇಮಕಾತಿ ಮಾಡಿಕೊಳ್ಳಲಿವೆ ಎಂದು, ಇದರಲ್ಲಿ ಅತ್ಯಧಿಕ ಕಂಪನಿಗಳು ದಕ್ಷಿಣ ರಾಜ್ಯದಲ್ಲಿವೆ ಎಂದು ಹೇಳಿದೆ. ದಕ್ಷಿಣ ರಾಜ್ಯಗಳಲ್ಲಿ ಶೇ. 34, ಪಶ್ವಿಮ ಭಾಗದಲ್ಲಿ ಶೇ.20, ಉತ್ತರದಲ್ಲಿ ಶೇ. 8, ಪೂರ್ವದಲ್ಲಿ ಶೇ. 3ರಷ್ಟು ಉದ್ಯೋಗವಕಾಶಗಳು ಸಿಗಲಿವೆ ಎನ್ನುತ್ತದೆ ಸಮೀಕ್ಷೆ.
ಕ್ಲೌಡ್ ಕಂಪ್ಯೂಟಿಂಗ್ ಜೊತೆಗೆ ಹೊಸ ತಾಂತ್ರಿಕತೆ ಕೂಡ ಉದ್ಯೋಗವಕಾಶಗಳಿಗೆ ಬಾಗಿಲು ತೆರೆಯಲು ಕಾರಣ ಎಂದಿದ್ದಾರೆ. 3-8 ವರ್ಷ ಅನುಭ ಇರುವ ಮಧ್ಯಶ್ರೇಣಿ ಐಟಿ ನಿಪುಣರಿಗೆ ಅಧಿಕ ಅವಕಾಶಗಳಿವೆ. ಸಾಫ್ಟ್‌ವೇರ್ ಅಭಿವೃದ್ಧಿಗೆ ಸಂಬಂಧಿಸಿದ ಡಾಟ್‍ನೆಟ್ ನೈಪುಣ್ಯತೆ ಇರುವವರ ಜೊತೆಗೆ ಡಾಟ್‌ನೆಟ್, ಜಾವಾ ಎರಡರಲ್ಲೂ ನೈಪುಣ್ಯತೆ ಇರುವವರಿಗೆ ಸಂಸ್ಥೆಗಳು ಹುಡುಕುತ್ತಿವೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.