ಲೋಕಸಭೆ ಗುರುವಾರ ಕೇಂದ್ರ ಹಣಕಾಸು ಮಸೂದೆಯನ್ನು ಅಂಗೀಕರಿಸಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಚಿನ್ನಾಭರಣಗಳ ಮೇಲಿನ 1 ಪ್ರತಿಶತ ಅಬಕಾರಿ ಸುಂಕವನ್ನು ವಿಧಿಸಿರುವುದನ್ನು ಉಳಿಸಿಕೊಂಡಿದೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಚಿನ್ನಾಭರಣಗಳ ಮೇಲೆ ವಿಧಿಸಿರುವ 1 ಪ್ರತಿಶತ ಅಬಕಾರಿ ಸುಂಕ, ವಾರ್ಷಿಕ 12 ಕೋಟಿ ವ್ಯಾಪಾರ ವಹಿವಾಟು ನಡೆಸುವ ಚಿನ್ನಾಭರಣ ವರ್ತಕರಿಗೆ ಮಾತ್ರ ಅನ್ವಯಿಸಲಿದ್ದು, ಸಣ್ಣ ಪ್ರಮಾಣದ ಚಿನ್ನಾಭರಣ ವರ್ತಕರು ಮತ್ತು ಕುಶಲಕರ್ಮಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಿತ್ತ ಸಚಿವ ಅರುಣ ಜೇಟ್ಲಿ ತಿಳಿಸಿದ್ದಾರೆ.
ದೇಶದ ಅರ್ಥಿಕ ಸವಾಲುಗಳ ಕುರಿತು ಮಾತನಾಡಿದ ಜೇಟ್ಲಿ, ಪ್ರಸಕ್ತ ಸಾಲಿನಲ್ಲಿ ಉತ್ತಮ ಮಾನ್ಸೂಲ್ ಮಳೆಯಾದರೆ, ದೇಶದ ಅರ್ಥಿಕ ಸುಧಾರಣೆಗೆ ಉತ್ತೇಜನ ದೊರೆಯಲಿದೆ. ಬ್ಯಾಂಕುಗಳ ಸಾಲ ಮರುಪಾವತಿ ಕುರಿತಂತೆ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.