ದೇಶೀಯ ಇಂಜಿನಿಯರಿಂಗ್, ನಿರ್ಮಾಣ ದಿಗ್ಗಜ ಎಲ್ ಅಂಡ್ ಟಿ ಕ್ಷಿಪಣಿ ಅಭಿವೃದ್ಧಿಗೆ ಸಿದ್ದವಾಗುತ್ತಿದೆ. ಇದಕ್ಕಾಗಿ ಯೂರೋಪ್ ಮೂಲದ ಎಂ ಬಿಡಿ ಮಿಸೈಲ್ಸ್ ಸಿಸ್ಟಂ ಎಂಬ ಕಂಪೆನಿಯೊಂದಿಗೆ ಕೈಜೋಡಿಸಿ ಜಂಟಿ ವೆಂಚೂರ್ ಸ್ಥಾಪಿಸಲಿದೆ.
ಈ ಸಂಬಂಧ ಎರಡು ಕಂಪೆನಿಗಳ ನಡುವೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದ ಅನ್ವಯ ಎಲ್ ಅಂಡ್ ಟಿಗೆ ಶೇ.50, ಎಂಬಿಡಿ ಮಿಸೈಲ್ಸ್ ಸಿಸ್ಟಂಗೆ ಶೇ.49ರಷ್ಟು ಪಾಲು ಸಿಗಲಿದೆ. ಈ ಯೋಜನೆಯಡಿ ಮೊದಲು ಐದನೇ ತಲೆಮಾರಿನ ಟ್ಯಾಂಕ್ ವಿಧ್ವಂಸಕ ಕ್ಷಿಪಣಿಗಳು ಅಭಿವೃದ್ಧಿಪಡಿಸಿ ಭಾರತ ಸೈನ್ಯಕ್ಕೆ ಸರಬರಾಜು ಮಾಡಲಿದೆ.
2012ರ ವೇಳೆಗೆ ರಕ್ಷಣಾ ಕ್ಷೇತ್ರದ ಮೂಲಕ ರೂ.10,000 ಕೋಟಿ ಟರ್ನೋವರ್ ಸಾಧಿಸಬೇಕೆಂಬ ಗುರಿಯನ್ನು ಎಲ್ ಅಂಡ್ ಡಿ ಇಟ್ಟುಕೊಂಡಿದೆ. ಈ ಮೂಲಕ ಭಾರತದ ರಕ್ಷಣಾ ಕ್ಷೇತ್ರಕ್ಕೆ ಇನ್ನಷ್ಟು ಬಲಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.