ಆದಾಯ ತೆರಿಗೆ ಇಲಾಖೆಯಿಂದ ಸ್ವೀಸ್ ಬ್ಯಾಂಕ್ ಖಾತೆಯ ವಿವರಗಳನ್ನು ಮುಚ್ಚಿಟ್ಟಿದ್ದ ಖ್ಯಾತ ಚಿನ್ನಾಭರಣ ವರ್ತಕರೊಬ್ಬರಿಗೆ ಕೋರ್ಟ್ ಎರಡು ವರ್ಷಗಳ ಶಿಕ್ಷೆ.ಯನ್ನು ವಿಧಿಸಿ ಆದೇಶ ಹೊರಡಿಸಿದೆ.
ನಗರ ರಾಜ್‌ಪುರ್ ರಸ್ತೆಯಲ್ಲಿ ಬೃಹತ್ ಚಿನ್ನಾಭರಣ ಮಳಿಗೆ ಹೊಂದಿರುವ ಮಾಲೀಕ ರಾಜು ವರ್ಮಾಗೆ ಕೋರ್ಟ್ ಎರಡು ವರ್ಷಗಳ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ಹೇರಿದೆ.
ಕಳೆದ 2006ರಲ್ಲಿ ಅಪರಾಧಿ ರಾಜು ವರ್ಮಾ ಸ್ವಿಸ್ ಬ್ಯಾಂಕ್ ಖಾತೆಯಲ್ಲಿ 92 ಲಕ್ಷ ರೂಪಾಯಿಗಳು ಪತ್ತೆಯಾಗಿದ್ದವು. ಸ್ವಿಸ್ ಬ್ಯಾಂಕ್ ಖಾತೆ ಹೊಂದಿರುವ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ. ಆದಾಯ ತೆರಿಗೆ 1961ರ ಅನ್ವಯ 276 ಸಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ರಾಜು ವರ್ಮಾಗೆ, ಕೋರ್ಟ್ ಒಂದು ತಿಂಗಳ ಜಾಮೀನು ನೀಡಿದೆ.
ಕಳೆದ 2012 ರಲ್ಲಿ ರಾಜು ವರ್ಮಾ ಸ್ವಿಸ್ ಬ್ಯಾಂಕ್‌ನಲ್ಲಿ ವೈಯಕ್ತಿಕ ಖಾತೆ ಹೊಂದಿದ್ದಾರೆ ಎನ್ನುವ ಲಿಖಿತ ದೂರು ದಾಖಲಿಸಲಾಗಿತ್ತು. ಸ್ವಿಸ್ ಬ್ಯಾಂಕ್ ಖಾತೆ ಹೊಂದಿರುವ ಬಗ್ಗೆ ವರ್ಮಾ ಐಟಿ ಇಲಾಖೆಗೆ ಮಾಹಿತಿ ನೀಡಿರಲಿಲ್ಲ. ಆದಾಯ ತೆರಿಗೆ ಇಲಾಖೆ ಆತನ ಮನೆಯ ಮೇಲೆ ದಾಳಿ ಮಾಡಿದಾಗ ಸ್ವಿಸ್ ಬ್ಯಾಂಕ್ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.