ನವದೆಹಲಿ: ಸರಕಾರವು ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ರಾಷ್ಟ್ರೀಯ ಉಳಿತಾಯ ಪತ್ರ ಸೇರಿದಂತೆ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರವನ್ನು ಶೇ 0.4ರಷ್ಟು ಏರಿಕೆ ಮಾಡಿದೆ.
ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರಕ್ಕೆ ಸಂಬಂಧಿಸಿದಂತೆ ತ್ರೈಮಾಸಿಕ ಅವಧಿ ಆಧರಿಸಿ ಅಧಿಸೂಚನೆ ಪ್ರಕಟಿಸಲಾಗುತ್ತದೆ. 2018-19 ವಿತ್ತ ವರ್ಷದಲ್ಲಿ ಅಕ್ಟೋಬರ್1-ಡಿಸೆಂಬರ್ 31 ಮೂರನೇ ತ್ರೈಮಾಸಿಕವಾಗಿದೆ. ಐದು ವರ್ಷಗಳ ನಿಶ್ಚಿತ ಠೇವಣಿ, ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಹಾಗೂ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವು ಶೇ 7.8, 8.7, 7.3ಕ್ಕೆ ಏರಿಕೆಯಾಗಿದ್ದು, ಹಿರಿಯ ನಾಗರಿಕರ ಉಳಿತಾಯ ಠೇವಣಿಗೆ ತ್ರೈಮಾಸಿಕವಾಗಿ ಬಡ್ಡಿ ಪಾವತಿಯಾಗುತ್ತದೆ.
ಸುಕನ್ಯಾ ಸಮೃದ್ಧಿ ಖಾತೆಗೆ ಹೆಚ್ಚಿನ ಬಡ್ಡಿದರ ಲಭ್ಯವಾಗಲಿದ್ದು, ಪ್ರಸಕ್ತ ಇರುವ ಬಡ್ಡಿದರಕ್ಕಿಂತ ಶೇ 0.4 ಹೆಚ್ಚು ದೊರೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.