Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳು

ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳು
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2016 (20:02 IST)
ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವವರ ಟಾಪ್ ಟೆನ್ ಪಟ್ಟಿಯಲ್ಲಿ ಭಾರತೀಯ ಮೂಲದ ಸಿಇಒಗಳಾದ ಪೆಪ್ಸಿಕೊ ಸಂಸ್ಥೆಯ ಇಂದ್ರಾ ನೂಯಿ ಮತ್ತು ಲ್ಯಾಂಡೆಲ್‌ಬಸೆಲ್ಸ್ ಭಾವೇಶ್ ಪಟೇಲ್ ಸ್ಥಾನ ಪಡೆದುಕೊಂಡಿದ್ದಾರೆ.
ಲ್ಯಾಂಡೆಲ್‌ಬಸೆಲ್ಸ್‌ ರಾಸಾಯನಿಕ ತಯಾರಿಕಾ ಸಂಸ್ಥೆಯ ಅಗ್ರ ಕಾರ್ಯನಿರ್ವಾಹಕರಾಗಿರುವ ಭಾವೇಶ ಪಟೇಲ್, 24.5 ಮಿಲಿಯನ್ ಡಾಲರ್ ಸಂಭಾವನೆ ಪಡೆಯುವ ಮೂಲಕ ಟಾಪ್‌ಟೆನ್ ಪಟ್ಟಿಯಲ್ಲಿ 6 ನೇಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪೆಪ್ಸಿಕೊ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ನೂಯಿ 22.2 ಮಿಲಿಯನ್ ಡಾಲರ್ ಸಂಭಾವನೆ ಪಡೆಯುವ ಮೂಲಕ 8 ನೇಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
 
ಗರಿಷ್ಟ ಸಂಭಾವನೆ ಪಡೆಯುವವರ 100 ಜನರ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ಸಂಸ್ಠೆಯ ಸಿಇಒ ಸತ್ಯ ನಡೆಲ್ಲಾ, 18.3 ಮಿಲಿಯನ್ ಡಾಲರ್ ಸಂಭಾವನೆ ಪಡೆಯುವ ಮೂಲಕ 26 ನೇಯ ಸ್ಥಾನ ಪಡೆದುಕೊಂಡಿದ್ದಾರೆ.
 
ಗರಿಷ್ಟ ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ ಒರಾಕಲ್ ಕಾರ್ಪೋರೆಶನ್ ಸಂಸ್ಥೆಯ ಮಾರ್ಕ್ ವಿ ಮತ್ತು ಸಫ್ರಾ ಎ ಕಾಟ್ಜ್ 53.2 ಮಿಲಿಯನ್ ಡಾಲರ್ ಸಂಭಾವನೆ ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ.
 
ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡ ಇತರರು, ವಾಲ್ಟ್ ಡಿಸ್ನಿ‌ಯ ರಾಬರ್ಟ್ ಎ ಐಗರ್ (43.5 ಮಿಲಿಯನ್ ಡಾಲರ್), ಹನಿವೆಲ್ ಇಂಟರ್ನ್ಯಾಷನಲ್ ಸಂಸ್ಥೆಯ ಡೇವಿಡ್ ಎಂ ಕೋಟ್ (33.1 ಮಿಲಿಯನ್ ಡಾಲರ್), ಜನರಲ್ ಎಲೆಕ್ಟ್ರಿಕ್ ಸಂಸ್ಥೆಯ ಜೆಫ್ರಿ ಆರ್ (26.4 ಮಿಲಿಯನ್ ಡಾಲರ್), ಎಟಿ&ಟಿ ಸಂಸ್ಥೆಯ ರ್ಯಾಂಡಾಲ್ ಎಲ್ ಸ್ಟಿಫನ್ಸನ್ (22.4 ಮಿಲಿಯನ್ ಡಾಲರ್), ಟ್ವೆಂಟಿಫಸ್ಟ್ ಸೆಂಚುರಿ ಫಾಕ್ಸ್ ಸಂಸ್ಥೆಯ ರೂಪರ್ಟ್ ಮುರ್ಡೋಕ್ ( 22.2 ಮಿಲಿಯನ್ ಡಾಲರ್), ಮತ್ತು ಮಾರ್ಗನ್ ಸ್ಟಾನ್ಲಿ ಸಂಸ್ಥೆಯ ಜೇಮ್ಸ್ ಪಿ ಗೊರಾನ್ (22 ಮಿಲಿಯನ್‌ ಡಾಲರ್).

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯರಿಂದ ನಮ್ಮ ಮೆಟ್ರೋ ಸುರಂಗ ಮಾರ್ಗ ಉದ್ಘಾಟನೆ