ತೀವ್ರ ಸಂಶೋಧನೆ ಬಳಿಕ ಕಳೆದ ನವೆಂಬರ್`ನಲ್ಲಿ ವಾಟ್ಸಾಪ್ ವಿಡಿಯೋ ಕಾಲಿಂಗ್ ಸೇವೆಯನ್ನ ಆರಂಭಿಸಿತು. ವಿಡಿಯೊ ಕಾಲಿಂಗ್ ಆರಂಭವಾಗಿ 6 ತಿಂಗಳು ಕಳೆದಿದ್ದು, ವಿಡಿಯೋ ಕಾಲಿಂಗ್ ಫೀಚರ್ ಬಳಸುತ್ತಿರುವ ವಿಶ್ವದ ರಾಷ್ಟ್ರಗಳ ಪೈಕಿ ಭಾರತೀಯರೇ ಮುಂದಿದ್ದಾರೆ ಎನ್ನುತ್ತಿದೆ ಸಂಸ್ಥೆ.
ವಾಟ್ಸಾಪ್`ನಲ್ಲಿ ದಿನಕ್ಕೆ ಭಾರತೀಯರು 5 ಕೋಟಿಯಷ್ಟು ವಿಡಿಯೋ ಕಾಲಿಂಗ್ ಮಾಡುತ್ತಿದ್ದಾರೆ. ಇದು ವಾಟ್ಸಾಪ್ ಬಳಕೆ ಮಾಡುವ ಎಲ್ಲ ರಾಷ್ಟ್ರಗಳಿಗೂ ಅಧಿಕ ಎಂದು ಸಂಸ್ಥೆ ಹೇಳಿದೆ. ವಿಶ್ವಾದ್ಯಂತ ತಿಂಗಳಿಗೆ 1.2 ಬಿಲಿಯನ್ ವಾಟ್ಸಾಪ್ ಸಕ್ರೀಯ ಬಳಕೆದಾರರಿದ್ದು, ಭಾರತದಿಂದಲೇ 200 ಮಿಲಿಯನ್ ಬಳಕೆದಾರರಿದ್ದಾರೆ. ವಿಡಿಯೋ ಕಾಲಿಂಗ್ ದೇಶಾದ್ಯಂತ ಜನಪ್ರಿಯವಾಗಿದ್ದು, ದಿನನಿತ್ಯ ಮಾಡಲಾಗುವ 340 ಮಿಲಿಯನ್ ವಿಡಿಯೋ ಕಾಲ್`ಗಳ ಪೈಕಿ 55 ಮಿಲಿಯನ್ ವಿಡಿಯೋ ಕಾಲ್ ವಾಟ್ಸಾಪ್`ನಿಂದಲೇ ಆಗುತ್ತಿವೆಯಂತೆ.
ಇತರೆ ಸ್ಪರ್ಧಾತ್ಮಕ ಸಂಸ್ಥೆಗಳಿಗೆ ಹೋಲಿಸಿದರೆ ವಿಳಂಬವಾಗಿ ವಿಡಿಯೋ ಕಾಲ್ ಪರಿಚಯಿಸಿದ ವಾಟ್ಸಾಪ್ ಜನಪ್ರಿಯತೆ ಮಾತ್ರ ವೇಗವಾಗಿದೆ. ಭಾರತದಲ್ಲಿರುವ ಕಡಿಮೆ ಗುಣಮಟ್ಟದ ಇಂಟರ್ನೆಟ್ ಸೇವೆಗೆ ಅನುಗುಣವಾಗಿ ವಿಡಿಯೋ ಕಾಲ್ ಸೇವೆ ನೀಡುವುದಾಗಿ ವಾಟ್ಸಾಪ್ ಸಂಸ್ಥೆ ಆರಂಭದಲ್ಲೇ ಘೋಷಿಸಿತ್ತು. ಅದರಂತೆ ಭಾರತದಲ್ಲೇ ವಾಟ್ಸಾಪ್ ವಿಡಿಯೋ ಕಾಲ್ ಖ್ಯಾತಿ ಗಳಿಸಿದೆ ಎಂದು ಸಂಸ್ಥೆ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ