ನವದೆಹಲಿ : ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ರಫ್ತು 100 ಶತಕೋಟಿ ಡಾಲರ್ ಗಡಿ ದಾಟಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಅದ್ರಂತೆ, 2021ರ ಸೆಪ್ಟೆಂಬರ್ʼನಲ್ಲಿ ಭಾರತದ ರಫ್ತು 33.44 ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು, ಆಗಸ್ಟ್ʼನಲ್ಲಿ 33.28 ಶತಕೋಟಿ ಅಮೆರಿಕನ್ ಡಾಲರ್ ಇತ್ತು. ಇನ್ನು ಜುಲೈನಲ್ಲಿ 35.17 ಶತಕೋಟಿ ಅಮೆರಿಕನ್ ಡಾಲರ್ ಆಗಿತ್ತು. ಇದು ಮೊದಲ ತ್ರೈಮಾಸಿಕವಾಗಿದ್ದು, ಒಟ್ಟಾರೇ, ಭಾರತದ ರಫ್ತು100 ಬಿಲಿಯನ್ ಅಮೆರಿಕನ್ ಡಾಲರ್ ದಾಟಿದೆ ಎಂದು ಎಂದಿದೆ.
ಸರ್ಕಾರದ ದತ್ತಾಂಶದ ಪ್ರಕಾರ, ಸೆಪ್ಟೆಂಬರ್ ಒಂದರಲ್ಲೇ ರಫ್ತು 33.44 ಶತಕೋಟಿ ಡಾಲರ್ ಆಗಿತ್ತು. ಆಗಸ್ಟ್ʼನಲ್ಲಿ ಈ ಸಂಖ್ಯೆ 33.28 ಶತಕೋಟಿ ಡಾಲರ್ ಆಗಿತ್ತು. ಎರಡನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ರಫ್ತು ಮೊತ್ತ ಜುಲೈ ತಿಂಗಳಲ್ಲಿ (35.17 ಶತಕೋಟಿ ಡಾಲರ್) ದಾಖಲಾಗಿದೆ.
ಒಟ್ಟು ಈಗ $101.89 ಬಿಲಿಯನ್ ತಲುಪಿದೆ ಎಂದು ದತ್ತಾಂಶವು ಮತ್ತಷ್ಟು ತೋರಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಭಾರತದಿಂದ ರಫ್ತು 197 ಶತಕೋಟಿ ಡಾಲರ್ ಮುಟ್ಟಿದೆ. ಸರ್ಕಾರವು ಆರ್ಥಿಕ ವರ್ಷಕ್ಕೆ 400 ಬಿಲಿಯನ್ ಡಾಲರ್ ಗುರಿಯನ್ನು ನಿಗದಿಪಡಿಸಿದೆ.