Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆ್ಯಪಲ್​ ಸಂಸ್ಥೆಯ ಈ ಫೋನ್ ಗಳಲ್ಲಿ ಸಮಸ್ಯೆ ಕಂಡುಬಂದರೆ ಉಚಿತ ಸರ್ವೀಸ್​ ಮಾಡಿಕೊಡಲಾಗುವುದು

ಆ್ಯಪಲ್​ ಸಂಸ್ಥೆಯ ಈ ಫೋನ್ ಗಳಲ್ಲಿ ಸಮಸ್ಯೆ ಕಂಡುಬಂದರೆ ಉಚಿತ ಸರ್ವೀಸ್​ ಮಾಡಿಕೊಡಲಾಗುವುದು
ನವದೆಹಲಿ , ಸೋಮವಾರ, 7 ಅಕ್ಟೋಬರ್ 2019 (06:06 IST)
ನವದೆಹಲಿ : ಪ್ರತಿಷ್ಠಿತ ಆ್ಯಪಲ್​ ​ ಸಂಸ್ಥೆಯ ಕೆಲವು ಫೋನ್‌ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಉಚಿತ ಸರ್ವಿಸ್​ ಸೇವೆಯನ್ನು ನೀಡಲು ಕಂಪೆನಿ ನಿರ್ಧಾರ ಮಾಡಿದೆ.




ಐಫೋನ್​ 6S ಹಾಗೂ ಐಫೋನ್​ 6S ಪ್ಲಸ್​ ಮಾಡೆಲ್‌ಗಳ ಕೆಲವು ಪೋನ್​ಗಳಲ್ಲಿನ ಕಾಂಪೋನೆಂಟ್​ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಸಮಸ್ಯೆಗಳು ಕಂಡುಬಂದಿದ್ದು,. ಹೀಗಾಗೀ ಆ್ಯಪಲ್​ ​ ಸಂಸ್ಥೆ ಸರ್ವಿಸ್​ ಮತ್ತು ರಿಪೇರಿ ಮಾಡಿಕೊಡಲು ಮುಂದಾಗಿದೆ.


ಅಕ್ಟೋಬರ್‌ 2018 ರಿಂದ ಆಗಸ್ಟ್‌ 2019ರ ನಡುವಿನ ಅವಧಿಯಲ್ಲಿ ಉತ್ಪಾದಿಸಲಾದ ಕೆಲವೊಂದು ಫೋನ್‌ಗಳಲ್ಲಿ ತಾಂತ್ರಿಕ ದೋಷವಿದ್ದು, ಅದರ ಬಗ್ಗೆ ಆ್ಯಪಲ್​ ತನ್ನ ಚೆಕ್​ ಬಾಕ್ಸ್​ನಲ್ಲಿ ನಮೂದಿಸಿದೆ.. ಷರತ್ತು & ನಿಬಂಧನೆಗಳಿಗೆ ಒಳಪಟ್ಟು, ಫೋನ್ ಖರೀದಿ ಮಾಡಿದ ದಿನಾಂಕದಿಂದ 2 ವರ್ಷಗಳ ಒಳಗಿನ ಅವಧಿಯಲ್ಲಿ, ಫೋನ್‌ನಲ್ಲಿ ಸಮಸ್ಯೆ ಕಂಡು ಬಂದಲ್ಲಿ ರಿಪೇರಿ ಮಾಡಿಕೊಡಲಾಗುವುದು.


 

Share this Story:

Follow Webdunia kannada

ಮುಂದಿನ ಸುದ್ದಿ

ನಿವೇದಿತಾಗೆ ಥ್ಯಾಂಕ್ಯೂ ಎಂದ ಚಂದನ್ ಶೆಟ್ಟಿ