ತಮ್ಮ ಖಾತಾದಾರರಿಗೆ ಮತ್ತಷ್ಟು ಡಿಜಿಟಲ್ ಸೇವೆಗಳನ್ನು ಒದಗಿಸಲು ಖಾಸಗಿ ಕ್ಷೇತ್ರದ ಬ್ಯಾಂಕಿಂಗ್ ದಿಗ್ಗಜ ಕಂಪನಿ ಐಸಿಐಸಿಐ ಮತ್ತು ಸೋಷಿಯಲ್ ಮೀಡಿಯಾ ನೆಟ್‌ವರ್ಕ್ ಟ್ವಿಟ್ಟರ್ ಜೊತೆಗೆ ಬುಧವಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಹೊರಟಿದೆ ಐಸಿಐಸಿಐ ಬ್ಯಾಂಕ್.
ಹತ್ತು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ತಮ್ಮ ಖಾತಾದಾರರು ಆನ್‌ಲೈನ್‌ನಲ್ಲಿ ಕೇಳಿದ ಪ್ರಶ್ನೆಗಳಿಗೆ ಇನ್ನು ಮುಂದೆ ನೇರವಾಗಿ ಉತ್ತರ ಕೊಡಬಹುದೆಂದು, ಅವರಿಂದ ಇನ್ನಷ್ಟು ವಿಷಯ ಸಂಗ್ರಹ ಮಾಡಲು ಸಾಧ್ಯವಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ತನ್ನ ಗ್ರಾಹಕರಿಗೆ ಈ ರೀತಿಯ ಬ್ಯಾಂಕ್ ಸೇವೆ ಒದಗಿಸುತ್ತಿರುವ ಮೊಟ್ಟ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಐಸಿಐಸಿಐ ಪಾತ್ರವಾಗಿದೆ. ತಮ್ಮ ಬ್ಯಾಂಕ್ ಖಾದಾದಾರರಿಗೆ ನೂತನ ಬ್ಯಾಂಕಿಂಗ್ ಅನುಭವ ನೀಡಲು ಈ ಸೌಲಭ್ಯವನ್ನು ತಂದಿರುವುದಾಗಿ ಬ್ಯಾಂಕ್ ಹಿರಿಯ ಮುಖ್ಯ ವ್ಯವಸ್ಥಾಪಕ ಸುಜಿತ್ ಗಂಗೂಲಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.