ದಕ್ಷಿಣ ಕೊರಿಯಾ ಮೂಲದ ಆಟೋಮೊಬೈಲ್ ದಿಗ್ಗಜ ಹುಂಡೈ ಮೋಟಾರ್ಸ್ ಇನ್ನಷ್ಟು ಸ್ಪೀಡು ಹೆಚ್ಚಿಸಿದೆ. ಹೊಸಹೊಸ ಮಾಡೆಲ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಸಿದ್ದವಾಗಿದೆ. ಮುಂಬರುವ ನಾಲ್ಕು ವರ್ಷಗಳಲ್ಲಿ ಎಂಟು ಹೊಸ ಮಾಡೆಲ್‌ಗಳನ್ನು ಮಾರುಕಟ್ಟೆಗೆ ತರುತ್ತಿದೆ.
2017ರಲ್ಲಿ ಭಾರತದಲ್ಲಿ ಹುಂಡೈ ಎರಡು ಅಂಕಿಗಳ ಬೆಳವಣಿಗೆಯನ್ನು ನಮೂದಿದಲಿದೆ. ಮುಂಬರುವ ನಾಲ್ಕು ವರ್ಷಗಳಲ್ಲಿ ಕಂಪೆನಿ 10 ಪ್ರಾಡಕ್ಟ್‌ಗಳನ್ನು ಲಾಂಚ್ ಮಾಡಲಿದೆ. ಅವುಗಳಲಿ ಎಂಟು ಹೊಸ ಮಾಡೆಲ್‌ಗಳೆಂದು, ಇನ್ನೆರಡು ಅಪ್‍ಗ್ರೇಡ್ ಆವೃತ್ತಿಗಳೆಂದು ಹುಂಡೈ ಮೋಟಾರ್ಸ್ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವೈಕೆ ಕೂ ತಿಳಿಸಿದ್ದಾರೆ.
ಕಾಂಪ್ಯಾಕ್ಟ್ ಕಾರು ವಿಭಾಗದಲ್ಲಿ ಹುಂಡೈ ತುಂಬಾ ಸ್ಟ್ರಾಂಗ್ ಆಗಿದೆ. ಐ10, ಐ20ಯಂತಹ ಮಾಡೆಲ್‌ಗಳೊಂದಿಗೆ ಶೇ.50ರಷ್ಟು ಮಾರುಕಟ್ಟೆಯನ್ನು ಹುಂಡೈ ಭಾರತದಲ್ಲಿ ಹೊಂದಿದೆ. ಮಿಡ್ ಸೆಗ್ಮೆಂಟ್ ಪೋರ್ಟ್‍ಫೋಲಿಯೋವನ್ನು ಇನ್ನಷ್ಟು ಬಲಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.