Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಏಕೈಕ ಉದ್ಯಮಿಯಿಂದ 10 ಸಾವಿರ ಕೋಟಿ ಕಪ್ಪು ಹಣ ಘೋಷಣೆ

ಏಕೈಕ ಉದ್ಯಮಿಯಿಂದ 10 ಸಾವಿರ ಕೋಟಿ ಕಪ್ಪು ಹಣ ಘೋಷಣೆ
ಅಮರಾವತಿ , ಗುರುವಾರ, 13 ಅಕ್ಟೋಬರ್ 2016 (14:49 IST)
ಹೈದ್ರಾಬಾದ್‌ನಲ್ಲಿ ಘೋಷಿಸಲಾದ 13 ಸಾವಿರ ಕೋಟಿ ಕಪ್ಪು ಹಣದಲ್ಲಿ 10 ಸಾವಿರ ಕೋಟಿ ಕಪ್ಪು ಹಣವನ್ನು ಏಕೈಕ ಉದ್ಯಮಿ ಘೋಷಿಸಿದ್ದಾರೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.
 
ಕೇಂದ್ರ ಸರಕಾರ ಕೂಡಲೇ 1 ಸಾವಿರ ರೂಪಾಯಿ ಮತ್ತು ಐದು ನೂರು ರೂಪಾಯಿಗಳ ನೋಟುಗಳನ್ನು ರದ್ದುಗೊಳಿಸಿದಲ್ಲಿ ಕಪ್ಪು ಹಣ ಚಲಾವಣೆಗೆ ತಡೆಯೊಡ್ಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
 
ದೇಶಾದ್ಯಂತ ಈಗಾಗಲೇ 65 ಸಾವಿರ ಕೋಟಿ ರೂಪಾಯಿ ಕಪ್ಪು ಹಣ ಘೋಷಿಸಲಾಗಿದ್ದು, ಅದರಲ್ಲಿ 13 ಸಾವಿರ ಕೋಟಿ ಹಣವನ್ನು ಹೈದ್ರಾಬಾದ್ ನಗರದಲ್ಲಿ ಘೋಷಿಸಲಾಗಿದೆ.
 
 ಒಬ್ಬ ಉದ್ಯಮಿ 10 ಸಾವಿರ ಕೋಟಿ ರೂಪಾಯಿ ಕಪ್ಪು ಹಣ ಘೋಷಿಸುವುದು ಸಾಧ್ಯವೇ? ಕಾನೂನಿನ ಪ್ರಕಾರ ಅವರ ಹೆಸರನ್ನು ಬಹಿರಂಗಪಡಿಸುವಂತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
 
ಭವಿಷ್ಯದಲ್ಲಿ ಕೂಡಾ ಕಪ್ಪು ಹಣವನ್ನು ಘೋಷಿಸಲು ಕೇಂದ್ರ ಸರಕಾರ ಅನುಮತಿ ನೀಡಲು ಸಾಧ್ಯವಿದೆ. 40-45 ರಷ್ಟು ದಂಡವನ್ನು ಕಟ್ಟಿ ಎಷ್ಟು ಬೇಕಾದರೂ ಕಪ್ಪು ಹಣವನ್ನು ಘೋಷಿಸಿ ನೆಮ್ಮದಿಯ ಜೀವನ ಸಾಗಿಸಬಹುದಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧ ಹೊಂದಿರುವ ಮಹಿಳೆಯ ತಲೆಬೋಳಿಸುವಂತೆ ಗ್ರಾಮ ಪಂಚಾಯಿತಿ ಆದೇಶ