ಪ್ರಮುಖ ಚೀನಾ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿ ಸಂಸ್ಥೆ ಷಿಯೋಮಿ ಗ್ಲೋಬಲ್ ಉಪಾಧ್ಯಕ್ಷ ಹ್ಯೂಗೋ ಬರ್ರಾ ಕಂಪೆನಿಯಿಂದ ಹೊರನಡೆದಿದ್ದಾರೆ. ಗೂಗಲ್ ಮಾಜಿ ಅಧ್ಯಕ್ಷರಾಗಿದ್ದ ಹ್ಯೂಗೋ ಕಳೆದ ನಾಲ್ಕು ವರ್ಷಗಳಿಂದ ಷಿಯೋಮಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಷಿಯೋಮಿಯಿಂದ ಅತ್ಯುನ್ನತ ಪದವಿಯಿಂದ ಕೆಳಗಿಳಿರುವ ಅವರು ಮತ್ತೆ ಸಿಲಿಕಾನ್ ಸಿಟಿಗೆ ಹೊರಡುತ್ತಿದ್ದಾರೆ. ಆದರೆ ಸಂಸ್ಥೆಯ ಸಲಹೆಗಾರನಾಗಿ ಮುಂದುವರೆಯಲಿದ್ದಾರೆ. ತನ್ನ ಫೇಸ್‌ಬುಕ್‍ನಲ್ಲಿ ನಾಲ್ಕು ವರ್ಷಗಳ ಹಿಂದೆ ಷಿಯೋಮಿ ಕಂಪೆನಿ ಸೇರಿದ ಸಂದರ್ಭವನ್ನು ಪ್ರಸ್ತಾವಿಸುತ್ತಾ, ಅತ್ಯಂತ ಸವಾಲಿನಿಂದ ಕೂಡಿದ ಸಾಹಸ ಎಂದು ವರ್ಣಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದೇನೆ. ಇದು ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಹಾಗಾಗಿ ನಾನೀಗ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಮನೆಗೆ ಹೊರಡಬೇಕೆಂದು. ಸಿಲಿಕಾನ್‍ವ್ಯಾಲಿಯಲ್ಲಿ ನನ್ನ ಕುಟುಂಬ ಬಳಿ ಹೋಗಿ ಮತ್ತೆ ಜೀವನ ಆರಂಭಿಸುತ್ತೇನೆ. ಹೊರಡುವ ಸಮಯ ಹತ್ತಿರಬಂದಿದೆ ಎಂದು ಹ್ಯೂಗೋ ಹೇಳಿದ್ದಾರೆ.
ಭಾರತದಲ್ಲಿ ಷಿಯೋಮಿ ಮಾರುಕಟ್ಟೇ 1 ಬಿಲಿಯನ್ ಡಾಲರ್ ಆದಾಯದೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸ್ಥಾಪಿಸಿದ್ದು ತಮ್ಮ ಕನಸು. ಬೇರಾವುದು ಕಂಪೆನಿ ಸಾಧಿಸದಷ್ಟು ವೇಗವಾಗಿ ಅಭಿವೃದ್ಧಿ ಹೊಂಂದಿದು ಎಂದಿದ್ದಾರೆ ಹ್ಯೂಗೋ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.