ಬೆಂಗಳೂರು: ಇದು ಸ್ಮಾ ರ್ಟ್ ಫೋನ್ ಯುಗ. ಕೈಯ್ಯಲ್ಲೊಂದು ಮೊಬೈಲ್, ಅದರೊಳಗೆ ವಾಟ್ಸಾಪ್, ಫೇಸ್ಬುಕ್ ಆ್ಯಪ್ ಇದ್ದರಂತೂ ಮುಗಿದೇ ಹೋಯಿತು. ಯುವಜನರು ಊಟ-ಆಹಾರದ ಜತೆಗೆ ನಿದ್ದೆಯನ್ನೂ ಮರೆತು ಬಿಡ್ತಾರೆ. ಯುವ ಸಮುದಾಯದ ಈ ಗೀಳನ್ನೇ ಬಂಡವಾಳವನ್ನಾಗಿಸಿಕೊಂಡು ತಂತ್ರಜ್ಞರು ದಿನ ಬೆಳಗಾದರೆ ಸಾಕು-ನಿತ್ಯ-ವಿನೂತನ ಸೌಲಭ್ಯಗಳನ್ನು ಆ್ಯಪ್ಗಳಲ್ಲಿ ಅಳವಡಿಸುತ್ತ ಹೋಗುತ್ತಾರೆ. ಈಗ ಅಂತಹದ್ದೇ ಒಂದು ಸೌಲಭ್ಯವನ್ನು ವಾಟ್ಸಾಪ್ಗೆ ಹೆಚ್ಚುವರಿಯಾಗಿ ಅಳವಡಿಸಲಾಗಿದೆ.
24 ಗಂಟೆಗಳ ಅವಧಿಯಲ್ಲಿ ನಿಮ್ಮ ವಾಟ್ಸಾಪ್ ಪ್ರೊಫೈಲ್ ಯಾರ್ಯಾರು ನೋಡಿದ್ದಾರೆ ಎನ್ನುವುದನ್ನು ಸುಲಭವಾಗಿ ಚೆಕ್ ಮಾಡಬಹುದು.ನೆಟ್ ಆನ್ ಮಾಡಿ ವಾಟ್ಸಾಪ್ ಓಪನ್ ಮಾಡುತ್ತಿದ್ದಂತೆ, ಮೊದಲು ನೋಡುವುದು ಯಾರ್ಯಾರ ಮೆಸೇಜ್ ಬಂದಿದೆ ಎಂದು. ಅದರಲ್ಲೂ ಹುಡುಗರು-ಹುಡುಗಿಯರು ತಮ್ಮ ಸ್ನೇಹಿತರ್ಯಾರಾದರೂ ಪ್ರೊಫೈಲ್ ಫೋಟೋ ಬದಲಿಸಿದ್ದಾರಾ ಎಂದು ಮಿಸ್ ಮಾಡದೆ ನೋಡುತ್ತಾರೆ. ಈ ರೀತಿ ನಿಮ್ಮ ಪ್ರೊಫೈಲ್ ಅನ್ನು ಯಾರು ನೋಡಿದ್ದಾರೆ ಎಂದು ತಿಳಿಯಲು ಇದನ್ನು ಫಾಲೋ ಮಾಡಿ.
ಮೊದಲನೆ ಹಂತ: 'view my profile' ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲದ ಕಾರಣ, ಗೂಗಲ್ ನಲ್ಲಿ ಸರ್ಚ್ ಮಾಡಿ ಮೊಬೈಲ್ಗೆ ಡೌನ್ಲೋಡ್ ಮಾಡಿಕೊಳ್ಳಬೇಕು.
ಎರಡನೇ ಹಂತ: ಅಪ್ರೂವ್ ಓಪನ್ ಮಾಡಿ ಆ್ಯಪ್ ಅನ್ನು ಮೊಬೈಲ್ಗೆ ಇನ್ಸ್ಟಾಲ್ ಮಾಡಿ ಓಪನ್ ಮಾಡಿಕೊಳ್ಳಬೇಕು. ನಂತರ ಆ ಅಪ್ಲಿಕೇಶನ್ನಲ್ಲಿ ಕೊಟ್ಟಿರುವ ಪ್ರಾಥಮಿಕ ಎಚ್ಚರಿಕೆಗಳೆಲ್ಲವನ್ನು ನಿಧಾನವಾಗಿ ಓದಿಕೊಂಡು ಅಪ್ರೂವ್ ಮಾಡಿಕೊಳ್ಳಿ.
ಮೂರನೇ ಹಂತ: ಅಲ್ಲಿಯೇ ಇರುವ ಸ್ಕ್ಯಾನ್ ಬಟನ್ ಕ್ಲಿಕ್ ಮಾಡಬೇಕು. ನಂತರ ಹೋಮ್ ಸ್ಕ್ರೀನ್ ನಲ್ಲಿರುವ ಸ್ಕ್ಯಾನ್ ಬಟನ್ ಕ್ಲಿಕ್ ಮಾಡಬೇಕು.
ನಾಲ್ಕನೆ ಹಂತ: ಸ್ಕ್ಯಾನ್ ಬಟನ್ ಕ್ಲಿಕ್ ಮಾಡಿದ ನಂತರ ಲೀಸ್ಟ್ ಲೋಡ್ ಆಗುತ್ತವೆ. ಅದು ಪೂರ್ಣಗೊಳ್ಳುವವರೆಗೂ ವೇಟ್ ಮಾಡಬೇಕು. ಆಗ ಡಾಟ ಅಪ್ಡೇಟ್ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಅದಾದ ನಂತರ, 24 ಗಂಟೆಯಲ್ಲಿ ನಿಮ್ಮ ಪ್ರೊಫೈಲ್ ನ್ನು ಯಾರ್ಯಾರು ನೋಡಿದ್ದಾರೆ ಎಂದು ಅಲ್ಲಿಯೇ ನಿಮಗೆ ಕಾಣುತ್ತದೆ. ಜಸ್ಟ್ ಟ್ರೈ ಇಟ್....
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.