Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಇಲ್ಲಿದೆ ಸಿಹಿಸುದ್ದಿ

ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಇಲ್ಲಿದೆ ಸಿಹಿಸುದ್ದಿ
ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2019 (09:49 IST)
ಬೆಂಗಳೂರು : ಬ್ಯಾಂಕ್ ಉದ್ಯೋಗ ಮಾಡಬೇಕೆಂದು ಬಯಸುವವರಿಗೆ ಬ್ಯಾಂಕ್ ವಲಯದಿಂದ ಸಿಹಿಸುದ್ದಿ. ಅದೇನೆಂದರೆ ಭಾರತದ ಪ್ರಮುಖ ಬ್ಯಾಂಕ್ ಗಳು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.


ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಹಲವು ಬ್ಯಾಂಕುಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ ಉದ್ಯೋಗದ ನಿರೀಕ್ಷೆಯಲ್ಲಿ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಎಸ್.ಬಿ.ಐ.ನಲ್ಲಿ 2000 ಪಿಓ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. 30 ವರ್ಷ ವಯೋಮಿತಿಯ, ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳಿಗೆ https://www.careerindia.com/news/sbi-po-recruitment-2019-apply-online-for-2000-probationary-officers-before-april-22-024734.html ಸಂಪರ್ಕಿಸುವುದು.


ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್(ಐ.ಡಿ.ಬಿ.ಐ.)ನಲ್ಲಿ ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನವಾಗಿದೆ. ಮಾಹಿತಿಗಾಗಿ https://www.careerindia.com/news/idbi-recruitment-2019-for-500-assistant-managers-grade-a-apply-online-before-april-15 ಸಂಪರ್ಕಿಸುವುದು.


ಸಿಂಡಿಕೇಟ್ ಬ್ಯಾಂಕ್ ನಲ್ಲಿ 129 ವಿಶೇಷ ಅಧಿಕಾರಿಗಳ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಏಪ್ರಿಲ್ 18 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ವಿದ್ಯಾರ್ಹತೆ ವಿವರ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ ವೆಬ್ ಸೈಟ್ https://www.careerindia.com/news/syndicate-bank-recruitment-2019-apply-online-for-129-sr-manager-manager-and-security-officer-posts-024712 ವೀಕ್ಷಿಸುವುದು.


ಐಡಿಬಿಐನಲ್ಲಿ 300 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 3 ವರ್ಷಗಳ ಅವಧಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನವಾಗಿದೆ. ಮಾಹಿತಿ, ನೋಂದಣಿಗೆ https://www.careerindia.com/news/idbi-recruitment-2019-for-300-executives-on-contract-earn-up-to-27000-per-month-024728 ಸಂಪರ್ಕಿಸುವುದು


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಖಾಸಗಿ ಭಾಗಗಳನ್ನು ವಾಸನೆರಹಿತ ಮಾಡಲು ಔಷಧಿಯಿದೆಯೇ ?