ನವದೆಹಲಿ: ಜಿಎಸ್ ಟಿ ಜಾರಿಗೆ ಬಂದ ಬೆನ್ನಲ್ಲೇ ಕೆಟಿಎಂ ಬೈಕ್ ಗಳ ದರದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.. ಈ ಬಗ್ಗೆ ಕೆಟಿಎಂ ಒಡೆತನದ ಬಜಾಜ್ ಆಟೋ ಖಚಿತಪಡಿಸಿದೆ.
ಆಸ್ಟ್ರೇಲಿಯಾ ಮೂಲದ ಕೆಟಿಎಂ ಬೈಕ್ ಗಳಿಗೆ 8,600 ರೂ ಗಳಷ್ಟು ಬೆಲೆ ಕಡಿಮೆಯಾಗಿರುವುದು ವಿಶೇಷ. 350ಸಿಸಿ ಎಂಜಿನ್ ಸಾಮರ್ಥ್ಯಕ್ಕೂ ಕೆಳಗಿರುವ ಕೆಟಿಎಂ ಶ್ರೇಣಿಯ ಬೈಕ್ ಗಳಾದ 200 ಡ್ಯೂಕ್, ಆರ್ ಸಿ 200 ಮತ್ತು 250 ಡ್ಯೂಕ್ ಮಾದರಿಗಳಲ್ಲಿನ ಎಕ್ಸ್ ಶೋ ರೂಂ ಬೆಲೆಗಳಲ್ಲಿ 8,600 ರೂ ಗಳಷ್ಟು ಬೆಲೆ ಕಡಿತಗೊಳಿಸಿರುವುದಾಗಿ ಬಜಾಜ್ ಆಟೋ ತಿಳಿಸಿದೆ.