ನವದೆಹಲಿ: ಕೊನೆಗೂ ಜಿಎಸ್ ಟಿಗೆ ಚಾಲನೆ ಸಿಕ್ಕಿದೆ. ಇದೀಗ ಯಾವುದು ಅಗ್ಗ ಯಾವುದು ದುಬಾರಿ ಎಂಬುದು ಜನ ಸಮಾನ್ಯರ ಪ್ರಶ್ನೆ. ಅದರ ಮಾಹಿತಿ ಇಲ್ಲಿದೆ ನೋಡಿ.
ಜಿಎಸ್ ಟಿ ಜಾರಿಯಾದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿದೆ. 57.80 ಪೈಸೆ ಇದ್ದ ಪೆಟ್ರೋಲ್ ದರ ಸುಮಾರು 3 ರೂ. ನಷ್ಟು ಇಳಿಕೆಯಾಗಿದೆ. ಆದರೆ ಕ್ಯಾಬ್ ಗಳ ರೇಟು ಜಾಸ್ತಿಯಾಗಲಿದೆ. ಅದೇ ರೀತಿ ಐಷಾರಾಮಿ ಕಾರುಗಳ ಬೆಲೆ ಹೆಚ್ಚಳವಾಗಲಿದೆ.
ಆದರೆ ಸ್ಕೂಟರ್, ಸೈಕಲ್ ಮೇಲಿನ ತೆರಿಗೆ ಇಳಿಕೆಯಾಗಲಿದೆ. ಮೊಬೈಲ್, ಮೊಬೈಲ್ ರಿಚಾರ್ಜ್ ಗಳ ಮೇಲಿನ ಸುಂಕ ಹೆಚ್ಚಳವಾಗಲಿದೆ. ಆದರೆ ರೈತರಿಗೆ ಬೇಕಾದ ಸಲಕರಣೆಗಳು, ರಸಗೊಬ್ಬರಗಳ ಮೇಲಿನ ತೆರಿಗೆ ಇಳಿಕೆಯಾಗಲಿದೆ.
ಶ್ಯಾಂಪು ದುಬಾರಿಯಾಗಲಿದ್ದು, ಸೋಪು, ಟೂಥ್ ಪೇಸ್ಟ್ ದರ ಕಡಿಮೆಯಾಗಲಿದೆ. ಹೈಫೈ ಊಟ ಕಷ್ಟ, ಆದರೆ ಸಣ್ಣ ಹೋಟೆಲ್ ನಲ್ಲಿ ಊಟ ಮಾಡೋರಿಗೆ, ಸಂಜೆಯ ತಿಂಡಿ ಕಷ್ಟವಲ್ಲ. ಇನ್ನು ಕಾಫಿ, ಟೀ, ಹಾಲು ದರದಲ್ಲಿ ಯಾವುದೇ ವ್ಯತ್ಯಾಸವಾಗಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ