Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಿ.ಎಸ್.ಟಿ: ಇಂದಿನಿಂದ ಮೂರು ದಿನಗಳ ಸಭೆ

ಜಿ.ಎಸ್.ಟಿ: ಇಂದಿನಿಂದ ಮೂರು ದಿನಗಳ ಸಭೆ
ನವದೆಹಲಿ , ಮಂಗಳವಾರ, 18 ಅಕ್ಟೋಬರ್ 2016 (12:07 IST)

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ಮಂಡಳಿಯ ಮೂರು ದಿನಗಳ ಸಭೆ ಇಂದಿನಿಂದ ನವದೆಹಲಿಯಲ್ಲಿ ಆರಂಭವಾಗಲಿದೆ.
 

2017ರ ಏಪ್ರಿಲ್ 1ರಂದು ದೇಶಾದ್ಯಂತ ಏಕರೂಪ ತೆರಿಗೆ ವ್ಯವಸ್ಥೆ ಜಾರಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಈ ಮೂರು ದಿನಗಳ ಸಭೆ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಜಿ.ಎಸ್.ಟಿ ದರ ನಿಗದಿ, ಪರಿಹಾರ ನೀತಿ ಸೇರಿದಂತೆ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. 

GST

ಹೊಸ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗೆ ಪರಿಹಾರ ಮತ್ತು ಆಡಳಿತಾತ್ಮಕ ನಿರ್ಧಾರವನ್ನು ನವೆಂಬರ್ 22ರ ಒಳಗೆ ಅಂತಿಮಗೊಳಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಜಿ.ಎಸ್.ಟಿ ಮಂಡಳಿಗೆ ಗಡುವು ನೀಡಿದೆ. ಈ ಹಿನ್ನಲೆಯಲ್ಲಿ ಮೂರು ದಿನದ ಸಭೆ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಎಲ್ಲ ಲಕ್ಷಣವೂ ಇದೆ.
 

ದಶದ 11 ರಾಜ್ಯಗಳು ಜಿ.ಎಸ್.ಟಿ ರಿಯಾಯತಿ ಪಡೆಯಲಿದ್ದು, ಒಟ್ಟು 11 ಲಕ್ಷ ಸೇವಾ ತೆರಿಗೆ ಪಾವತಿದಾರರಿದ್ದಾರೆ. ಈ ಎಲ್ಲ ತೆರಿಗೆದಾರರ ಸಮಗ್ರ ಮಾಹಿತಿ ಪಡೆಯುವ ಕುರಿತಂತೆ ಕೇಂದ್ರ ಸರಕಾರಕ್ಕೆ ವಿಶೇಷ ಹಕ್ಕು ನೀಡುವ ಕುರಿತು ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿವಾದ: ಇಂದು ಸುಪ್ರೀಂನಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ