ಪೈರಸಿ ಕಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿರುವ ಗೂಗಲ್ ಮತ್ತು ಇತರ ಸರ್ಚ್ ಇಂಜಿನ್‌ಗಳು ಕೆಲವು ವೆಬ್‌ಸೈಟ್‌ಗಳನ್ನು ಸಂಪೂರ್ಣವಾಗಿ ಬ್ಲ್ಯಾಕ್ ಮಾಡುವ ಕಠಿಣ ನಿರ್ಧಾರಕ್ಕೆ ಬಂದಿವೆ.
ಹಾಲಿವುಡ್ ಪ್ರತಿನಿಧಿಗಳು ಇತ್ತೀಚಿಗಷ್ಟೆ ಗೂಗಲ್ ಸಂಸ್ಥೆ ಪೈರಸಿಯನ್ನು ಪ್ರೋತ್ಸಾಹ ನೀಡುತ್ತಿದೆ ಎಂದು ಟೀಕಿಸಿದ ಹಿನ್ನೆಲೆಯಲ್ಲಿ ಗೂಗಲ್ ಮತ್ತು ಇತರ ಸಂಸ್ಥೆಗಳು ಈ ಕ್ರಮಕ್ಕೆ ಮುಂದಾಗಿವೆ ಎನ್ನಲಾಗುತ್ತಿದೆ.
ಪೈರಸಿ ಡೌನ್‌ಲೋಡ್ ಸಂಸ್ಥೆ ಟೊರೆಂಟ್‌ನ ಎಲ್ಲ ಸೈಟ್‌ಗಳನ್ನು ನಿಷೇಧಿಸಲು ಗೂಗಲ್ ಮುಂದಾಗಿದೆ. ಪೈರಸಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಂಗ್ಲೆಂಡ್‌ನ ಬೌದ್ಧಿಕ ಕಚೇರಿ ಸಂಸ್ಥೆಯಲ್ಲಿ ಗೂಗಲ್. ಯಾಹೂ, ಬಿಂಗ್ ಹಾಗೂ ಹಾಲಿವುಡ್ ಪ್ರತಿನಿಧಿಗಳು ಸಭೆ ಸೇರಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಜೂನ್ 1, 2017 ರಿಂದ ಇದು ಜಾರಿಯಲ್ಲಿ ಬರಲಿದೆ.