ಗೃಹ ಖರೀದಿದಾರರಿಗೆ ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. 2016 ರ ಸಾಲಿನ ವಸತಿ ಯೋಜನೆ ಅಡಿಯಲ್ಲಿ ಸಿದ್ಧವಾಗಿರುವ 12 ಸಾವಿರ ಫ್ಲ್ಯಾಟ್‌ಗಳನ್ನು ಗೃಹ ಖರೀದಿದಾರರಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಸತಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗಿರುವ ಒಟ್ಟು ಫ್ಲ್ಯಾಟ್‌ಗಳ ಪೈಕಿ, ಹೆಚ್ಚು ಫ್ಲ್ಯಾಟ್‌ಗಳು ರೋಹಿಣಿ, ದ್ವಾರಕಾ, ನರೇಲಾ, ವಸಂತ್ ಕುಂಜ್ ಹಾಗೂ ಜಸೋಲಾ ಪ್ರದೇಶದಲ್ಲಿ 2014 ರಲ್ಲಿ ನಿರ್ಮಿಸಲಾದ ಮತ್ತು ಆಧೀನಕ್ಕೆ ತೆಗೆದುಕೊಳ್ಳಲಾಗದ 10 ಸಾವಿರ ಫ್ಲ್ಯಾಟ್‌ಗಳಿದ್ದು, ಇತರ ಆಧೀನಕ್ಕೆ ತೆಗೆದುಕೊಳ್ಳಲಾಗದ ಹೆಚ್ಚುವರಿ 2 ಸಾವಿರ ಫ್ಲ್ಯಾಟ್‌ಗಳಿವೆ ಎಂದು ಡಿಡಿಎ ಅಧಿಕಾರಿಗಳು ತಿಳಿಸಿದ್ದಾರೆ
ವಸತಿ ವಿಭಾಗದ ವತಿಯಿಂದ ದೀಪಾವಳಿ ಹಬ್ಬದ ಸಮಯದಲ್ಲಿ (ಅಕ್ಟೋಬರ್ ತಿಂಗಳ ಕೊನೆಯಲ್ಲಿ) ಗೃಹ ಖರೀದಿದಾರರಿಗೆ ಮನೆ ನೀಡುವ ಕುರಿತು ತೀರ್ಮಾನಿಸಲಾಗಿದೆ.
ಕೊನೆಯ ವಸತಿ ಯೋಜನೆ ಅಡಿಯಲ್ಲಿ ಕೇವಲ ಒಂದು ಬೆಡ್‌ರೂಮ್ ಹೊಂದಿರುವ ಎಲ್‌ಐಜಿ ಫ್ಲ್ಯಾಟ್‌ಗಳಾಗಿದ್ದು, ಈ ಫ್ಲ್ಯಾಟ್‌ಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಹೊಸ ಯೋಜನೆಯ ಕುರಿತು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ವಸತಿ ಕಲ್ಪಿಸಿಕೊಡುವ ಉದ್ದೇಶದಿಂದ ಡಿಡಿಎ ಯೋಜನೆ ಅಡಿಯಲ್ಲಿ ಒಟ್ಟು 10 ಸಾವಿರ ಫ್ಲ್ಯಾಟ್‌ಗಳು ನಿರ್ಮಾಣವಾಗಿದ್ದವು.
ನೋಂದಣಿ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.
ಎಲ್‌ಐಜಿ ವರ್ಗದಲ್ಲಿ ಮನೆ ಪಡೆಯ ಬಯಸುವ ಗ್ರಾಹಕರು 1.5 ಲಕ್ಷ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗಿದ್ದು, ಎಂಐಜಿ ವರ್ಗದಲ್ಲಿ ಮನೆ ಪಡೆಯ ಬಯಸುವ ಗ್ರಾಹಕರು 5 ಲಕ್ಷ ರೂಪಾಯಿ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ