ಬೆಂಗಳೂರು: ಟಿಕ್ ಟಾಕ್ ಆ್ಯಪ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇಷ್ಟು ದಿನ ಮನರಂಜನೆಗಾಗಿ ಉಪಯೋಗಿಸುತ್ತಿದ್ದ ಟಿಕ್ ಟಾಕ್ ಮೂಲಕ ಇನ್ನುಮುಂದೆ ಹಣ ಕೂಡ ಗಳಿಸಿಬಹುದಂತೆ.
ಹಲವಾರು ದೊಡ್ಡ ಕಂಪೆನಿಗಳು ಟಿಕ್ ಟಾಕ್ ಪ್ಲಾಟ್ ಫ್ಲಾರ್ಮ್ ಗೆ ಸೇರಿ ಟಿಕ್ ಟಾಕ್ ಬಳಕೆದಾರರಿಗೆ ಹಣ ಗಳಿಸುವ ಅವಕಾಶ ಒದಗಿಸುತ್ತಿದೆ. ಇತ್ತೀಚೆಗೆ ಮೊಬೈಲ್ ಬ್ರಾಂಡ್ ಐ ಟೆಲ್ ಕಂಪೆನಿ ಟುಕ್ ಟಾಕ್ ನಲ್ಲಿ ಅಭಿಯಾನವೊಂದನ್ನು ಪ್ರಾರಂಭಿಸಿತ್ತು.
ಐ ಟೆಲ್ ನಲ್ಲಿರುವ ಹಾಡನ್ನು ಅಗತ್ಯವಾದ ಟ್ಯಾಗ್ ಬಳಸಿ ಟಿಕ್ ಟಾಕ್ ಬಳಕೆದಾರರು ಪ್ರದರ್ಶಿಸಬೇಕಾಗಿತ್ತು. ನಂತರ ಇದರ ವಿಡಿಯೋ ಅಪ್ ಲೋಡ್ ಮಾಡಬೇಕಿತ್ತು. ಇದಕ್ಕೆ ಐಟೆಲ್ ಕಂಪನಿಯವರು ಬಳಕೆದಾರರಿಗೆ ಹಣವನ್ನು ಪಾವತಿಸಿದ್ದಾರಂತೆ.
ಎಲ್ಲಾ ಟಿಕ್ ಟಾಕ್ ಬಳಕೆದಾರರಿಗೆ ಹಣ ಗಳಿಸಲು ಸಾಧ್ಯವಿಲ್ಲ. ಫಾಲೋವರ್ಸ್ ಜಾಸ್ತಿ ಇದ್ದ ಬಳಕೆದಾರರಿಗೆ ಮಾತ್ರ ಈ ಅವಕಾಶವನ್ನು ಕಂಪನಿ ನೀಡಲಿದೆ.