Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಮಂತ್ರಿ ಶ್ರಮಯೋಗಿ ಮನಧನ್ ಯೋಜನೆಯಲ್ಲಿ ಮಾಸಿಕ 3000 ಪಡೆಯಿರಿ

ಪ್ರಧಾನಮಂತ್ರಿ ಶ್ರಮಯೋಗಿ ಮನಧನ್ ಯೋಜನೆಯಲ್ಲಿ ಮಾಸಿಕ 3000 ಪಡೆಯಿರಿ
ನವದೆಹಲಿ , ಸೋಮವಾರ, 25 ಮಾರ್ಚ್ 2019 (20:25 IST)
ಕೇಂದ್ರ ಸರ್ಕಾರ 2019ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮನಧನ್ ಯೋಜನೆಯನ್ನು ಘೋಷಿಸಿದ್ದು, ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ಮಾಸಿಕ 300 ಸಾವಿರ ರೂಪಾಯಿ ಪಿಂಚಣಿಯನ್ನು ನೀಡುವ ಗುರಿಯನ್ನು ಹೊಂದಿದೆ. ಇದರಲ್ಲಿ ನೀವು ಎಷ್ಟು ಹಣ ಹೂಡಬೇಕು ಎನ್ನುವುದು ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ.
ಪ್ರಧಾನಮಂತ್ರಿ ಶ್ರಮಯೋಗಿ ಮನಧನ್ ಯೋಜನೆಯ ಪ್ರಕಾರ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ 60 ವರ್ಷವಾಗುತ್ತಿದ್ದಂತೆ ಅವರಿಗೆ ಮಾಸಿಕವಾಗಿ  3000 ರೂಪಾಯಿ ಪಿಂಚಣಿ ದೊರೆಯುತ್ತದೆ. ಒಂದು ವೇಳೆ ಪಿಂಚಣಿ ಪಡೆಯುವ ವ್ಯಕ್ತಿ ಮೃತನಾದಲ್ಲಿ ಅದರ ಹಣ ಆತನ ಪತ್ನಿಗೆ ವರ್ಗಾಯಿಸುವ ಸೌಲಭ್ಯವಿದೆ. ಯೋಜನೆಯಲ್ಲಿ ಕಾರ್ಮಿಕರು ಎಷ್ಟು ಹಣ ಹೂಡಿಕೆ ಮಾಡುತ್ತಾರೆಯೇ ಅಷ್ಟೆ ಹಣವನ್ನು ಸರ್ಕಾರ ಹೂಡಿಕೆ ಮಾಡುತ್ತದೆ.  
 
ಒಂದು ವೇಳೆ ನೀವು ಪ್ರಧಾನಮಂತ್ರಿ ಶ್ರಮಯೋಗಿ ಮನಧನ್ ಯೋಜನೆ ಖಾತೆಯನ್ನು ತೆರೆಯಬೇಕು ಎಂದು ಬಯಸಿದಲ್ಲಿ ಖಾತೆ ಹೇಗೆ ತೆರೆಯಬೇಕು ಎನ್ನುವುದನ್ನು ನಾವು ನಿಮಗೆ ಹೇಳುತ್ತೇವೆ. ಖಾತೆ ತೆರೆಯುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಪಿಎಫ್‌ ವೆಬ್‌ಸೈಟ್ ಅಥವಾ ಕಾಮನ್ ಸರ್ವಿಸ್ ಸೆಂಟರ್‌ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ. 
 
ಯಾರಿಗೆ ಈ ಯೋಜನೆಯ ಲಾಭವಾಗಲಿದೆ ಗೊತ್ತಾ?
1 ನೀವು ಅಸಂಘಟಿತ ಕ್ಷೇತ್ರದಲ್ಲಿ ಉದ್ಯೋಗಿಯಾಗಿರಬೇಕು.
2. ನಿಮ್ಮ ವಯಸ್ಸು 18 ವರ್ಷದಿಂದ 40 ವರ್ಷದೊಳಗಿರಬೇಕು.
3. ನಿಮ್ಮ ಮಾಸಿಕ ಆದಾಯ 15 ಸಾವಿರ ರೂ. ಒಳಗಿರಬೇಕು.
 
ಯಾವ ಯಾವ ದಾಖಲೆಗಳನ್ನು ನೀಡಬೇಕಾಗುತ್ತದೆ
1. ಆಧಾರ ಕಾರ್ಡ್
2. ಉಳಿತಾಯ ಖಾತೆ/ ಜನಧನ ಖಾತೆಯೊಂದಿಗೆ ಐಎಫ್‌ಎಸ್‌ಸಿ ಕೋಡ್.
3. ಮೊಬೈಲ್ ನಂಬರ್.
 
ಯಾವ ರೀತಿ ಅರ್ಜಿ ಸಲ್ಲಿಸಬಹುದು?
 
ಈ ಯೋಜನೆಯ ಲಾಭ ಪಡೆಯಬೇಕು ಎಂದಾದಲ್ಲಿ ಆಧಾರ ಕಾರ್ಡ್, ಬ್ಯಾಂಕ್‌ಪಾಸ್‌ಬುಕ್ ಮತ್ತು ಮೊಬೈಲ್‌ನೊಂದಿಗೆ ಹತ್ತಿರದ ಸಿಇಸಿ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ನಿಮ್ಮ ಉಳಿತಾಯ ಖಾತೆ ಮತ್ತು ಐಎಫ್‌ಎಸ್‌ಸಿ ಕೋಡ್ ಹೊಂದಿರಬೇಕಾಗುತ್ತದೆ.
 
ಎಷ್ಟು ಹಣ ಹೂಡಬೇಕಾಗುತ್ತದೆ?
 
ನೀವು ಎಷ್ಟು ಹಣ ಜಮಾ ಮಾಡಬೇಕು ಎನ್ನುವುದು ನಿಮ್ಮ ವಯಸ್ಸಿನ ಮೇಲೆ ಅವಲಂಬನೆಯಾಗಿರುತ್ತದೆ. ನಿಗದಿಯಾದ ಹಣವನ್ನು ನೀವು 60 ವರ್ಷಗಳವರೆಗೆ ಭರಿಸಬೇಕಾಗುತ್ತದೆ. ಆರಂಭದಲ್ಲಿ ಒಂದು ಬಾರಿ ನೀವು ನಗದು ಹಣವನ್ನು ಕಟ್ಟಬೇಕಾಗುತ್ತದೆ. ನಂತರ ನಿಮ್ಮ ಉಳಿತಾಯ ಖಾತೆಯಿಂದ ಮಾಸಿಕವಾಗಿ ಕಡಿತ ಮಾಡಲಾಗುತ್ತದೆ. ನಿಮಗೆ 60 ವರ್ಷಗಳಾಗುವವರೆಗೆ ನೀವು ಹಣ ಕಟ್ಟಬೇಕಾಗುತ್ತದೆ.
 
ನಿಮ್ಮ ಖಾತೆಯನ್ನು ಹೀಗೆ ತೆರೆಯಲಾಗುತ್ತದೆ
 
ಸಿಇಸಿ ಕಚೇರಿಯಲ್ಲಿ ನಿಮ್ಮ ಖಾತೆಯ ವಹಿವಾಟು ಪೂರ್ಣಗೊಂಡ ನಂತರ ಆನ್‌ಲೈನ್ ಪಿಂಚಣಿ ನಂಬರ್ ಜನರೇಟ್ ಆಗುತ್ತದೆ. ಸಿಇಸಿ ಕಚೇರಿಯ ಅಧಿಕಾರಿಗಳು ನಿಮಗೆ ಯೋಜನೆಯ ಪ್ರಿಂಟ್‌ಔಟ್ ನೀಡುತ್ತದೆ. ಪೆನ್ಶನ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ಪಿಂಚಣಿ ಆರಂಭವಾದ ದಿನಾಂಕ, ಮಾಸಿಕ ಪಿಂಚಣಿ ಮೊತ್ತ, ಪಿಂಚಣಿ ಖಾತೆಯ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ಖಾತೆದಾರರಿಗೆ ನೀಡಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೂ ಟರ್ನ್ ಹೊಡೆದ ಜನಾರ್ಧನ್ ಪೂಜಾರಿ