ಅಟೋ ಎಕ್ಸ್‌ಪೋ ಪ್ರದರ್ಶನದಲ್ಲಿ ವಿದ್ಯುತ್ ಚಾಲಿತ ಸೂಪರ್‌ಬೈಕ್‌ಗಳನ್ನು ಪ್ರದರ್ಶಿಸಲಾಗಿದ್ದು ಕೇವಲ 3 ಸೆಕೆಂಡ್‌ಗಳಲ್ಲಿ 0-100 ಕಿ.ಮೀ ವೇಗವನ್ನು ಹೊಂದಿದ್ದು ಸೂಪರ್‌ಬೈಕ್‌ಗಳು ಗರಿಷ್ಛ ವೇಗ ಪ್ರತಿ ಗಂಟೆಗೆ 200 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯ ಪಡೆದಿವೆ.
ವಿದ್ಯುತ್‌ಚಾಲಿತ ಸೂಪರ್‌ಬೈಕ್ ಮಾಡೆಲ್ ಒನ್ ಲಿಕ್ವಿಡ್ ಕೂಲ್ಡ್ ಎಸಿ ಇಂಡಕ್ಷನ್ ಮೋಟಾರ್ 68PS ಪವರ್ ಮತ್ತು 84 ಎನ್ಎಂ ಟಾರ್ಕ್ ವಿತರಿಸುವ ಸಾಮರ್ಥ್ಯವಿದೆ. ಕಂಪೆನಿಯ ಹೇಳಿಕೆಯ ಪ್ರಕಾರ 8400 ಆರ್‌ಪಿಎಂ ಉತ್ಪತ್ತಿ ಮಾಡುವ ಕ್ಷಮತೆ ಹೊಂದಿದೆ
ಸೂಪರ್‌ಬೈಕ್‌ಗಳು ಕೇವಲ ಮೂರು ಸೆಕೆಂಡ್‌ಗಳಲ್ಲಿ 0-100 ವೇಗವನ್ನು ಹೆಚ್ಚಿಸಬಹುದಾಗಿದ್ದು ಬೈಕ್ ಸವಾರ್ ಗರಿಷ್ಠ ಪ್ರತಿ ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ ಸ್ಯಾಮ್ಸಂಗ್ ಅಭಿವೃದ್ಧಿಪಡಿಸಿದ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ.
ಸೂಪರ್‌ಬೈಕ್‌ನ್ನು ಅರ್ಧ ಘಂಟೆಯೊಳಗೆ 80% ರಷ್ಟು ಚಾರ್ಜ್ ಮಾಡಲು ಸಾಧ್ಯವಿದೆ ಎಂದು ಕಂಪೆನಿ ಪ್ರಕಟಿಸಿದೆ. ಸೂಪರ್‌ಬೈಕ್‌ಗಳು ಮಾರ್ಚ್ 2019 ರಲ್ಲಿ ಮಾರುಕಟ್ಟೆಗೆ ಬರಲಿದ್ದು ಬೈಕ್ ದರ (ಶೋರೂಮ್ ಹೊರತುಪಡಿಸಿ) 5-6 ಲಕ್ಷಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ.