ಪ್ರಮುಖ ಕಾರು ಉತ್ಪದನಾ ಕಂಪನಿ ಫೋರ್ಡ್ ಮೋಟಾರ್ ದೊಡ್ಡ ಸಂಖ್ಯೆಯಲ್ಲಿ ಸೆಡಾನ್ ಕಾರುಗಳನ್ನು ಹಿಂಪಡೆಯುತ್ತಿದೆ. ಸೀಟ್ ಬೆಲ್ಟ್ ಫಂಕ್ಷನಿಂಗ್‌ನಲ್ಲಿ ತಲೆದೋರಿದ ಸಮಸ್ಯೆಯ ಕಾರಣ ಅಮೆರಿಕಾ, ಉತ್ತರ ಅಮಿರಿಕಾದ ಸುಮಾರು 680000 ಕಾರುಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದೆ.
ಅಪಘಾತ ಸಂಭವಿಸಿದಾಗ ಸೀಟ್ ಬೆಲ್ಟ್ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿ ತಿಳಿಸಿದೆ. 2013-14 ಫೋರ್ಡ್ ಫ್ಯೂಜನ್, 2015-16 ಫೋರ್ಡ್ ಮೆಂಡೋ, ಮತ್ತೆ 2013-14ರ ಲಿಂಕನ್ ಎಂಕೆಜೆ ಮಾಡೆಲ್ ಕಾರುಗಳನ್ನು ಕಂಪನಿ ಹಿಂಪಡೆಯುತ್ತಿದೆ.
ತಾಂತ್ರಿಕ ಸಮಸ್ಯೆಯ ಕಾರಣ ಅಧಿಕ ಉಷ್ಣತೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಸೀಟ್ ಬೆಲ್ಟು ಸಮಸ್ಯೆಯನ್ನು ಪರಿಹರಿಸಲು ಈ ಕಾರುಗಳನ್ನು ಹಿಂಪಡೆಯುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ. ಅಪಘಾತ ಸಮಯದಲ್ಲಿ ಸೀಟ್ ಬೆಲ್ಟ್, ಏರ್ ಬ್ಯಾಗ್ ಪೂರಕವಾಗಿ ಕೆಲಸ ಮಾಡುತ್ತಿಲ್ಲ. ಈ ಲೋಪದಿಂದ ಅಪಘಾತಗಳು ಜಾಸ್ತಿಯಾಗುತ್ತಿದ್ದವು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.