ನಗದು ರಹಿತ ವಹಿವಾಟಿಗೆ ಅನುಕೂಲವಾಗಲಿ ಎಂದು ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಭೀಮ್ ಆಂಡ್ರಾಯ್ಡ್ ಆಪ್‌ಗೆ ಅದ್ಭುತ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಈ ಅಪ್ಲಿಕೇಷನ್‌ಗೆ ಗೂಗಲ್ ಪ್ಲೇಸ್ಟೋರಲ್ಲಿ 4.1 ರೇಟಿಂಗ್ ಕೊಟ್ಟಿದ್ದಾರೆ ಬಳಕೆದಾರರು.
ಡಿಸೆಂಬರ್ 30ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಆಪ್ ಬಿಡುಗಡೆ ಮಾಡಿದ್ದರು ಪ್ರಧಾನಿ. ಇದನ್ನು ಡೌನ್‍ಲೋಡ್ ಮಾಡಿಕೊಳ್ಳುವ ಮೂಲಕ ಸಾಮಾನ್ಯ ಜನ ಕೂಡ ನಗದು ರಹಿತ ವಹಿವಾಟು ನಡೆಸಬಹುದು.
ಆಪ್ ಡೌನ್‍ಲೋಡ್ ಆದ ಕೂಡಲೆ ನಿಮ್ಮ ಬ್ಯಾಂಕ್ ಖಾತೆ ಅಥವಾ ಯೂಪಿಐ ಪಿನ್ ಟೈಪಿಸಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಬಳಕೆದಾರರ ಮೊಬೈಲ್ ನಂಬರ್, ವಿಳಾಸ ಇರುತ್ತದೆ. ಕೂಡಲೆ ಭೀಮ್ ಮೂಲಕ ವಹಿವಾಟನ್ನು ನಡೆಸಬಹುದು. ಯೂಪಿಐ ಮೂಲಕ ಅಷ್ಟೇ ಅಲ್ಲದೆ ಯೂಪಿಐ ಇಲ್ಲದ ಖಾತೆಗಳಿಗೂ ಹಣ ವರ್ಗಾಯಿಸಬಹುದು.
ಎಂಎಂಐಡಿ, ಐಎಫ್‍ಎಸ್‍ಸಿ ಮೂಲಕವೂ ಇದು ಕೆಲಸ ಮಾಡುತ್ತದೆ. ಇತರರಿಂದ ನೀವು ಹಣ ಪಡೆಯಬಹುದು, ಸರಿಸುಮಾರು ಎಲ್ಲಾ ಖಾಸಗಿ, ಸರಕಾರಿ ಸ್ವಾಮ್ಯದ ಖಾತೆಗಳಿಗೆ ಹಣ ವರ್ಗಾಯಿಸಬಹುದು. ತುಂಬಾ ವೇಗವಾಗಿ ಕಾರ್ಯನಿರ್ವಹಿಸುವ ಈ ಆಪ್ ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿದೆ. ಶೀಘ್ರದಲ್ಲೇ ಇತರೆ ಭಾರತೀಯ ಭಾಷೆಗಳಲ್ಲೂ ಬಿಡುಗಡೆ ಮಾಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.