Webdunia - Bharat's app for daily news and videos

Install App

ಅತ್ಯುತ್ತಮ ಶಾಲೆಗಳನ್ನು ಗೌರವಿಸಿದ ’ಎಜುಕೇಶನ್ ಟುಡೆ’

Webdunia
ಮಂಗಳವಾರ, 13 ಡಿಸೆಂಬರ್ 2016 (12:52 IST)
ಶಿಕ್ಷಣ ಕ್ಷೇತ್ರದಲ್ಲಿ ಅದೊಂದು ಅಭೂತಪೂರ್ವವಾದ ಕ್ಷಣ. ದೇಶದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಸುದೀರ್ಘವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವದು. ದೇಶದ ವಿವಿಧ ಭಾಗಗಳಿಂದ ಬಂದಿದ್ದ 350 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಅಧ್ಯಕ್ಷರು ಈ ಪ್ರತಿಷ್ಠಿತ ಪ್ರಶಸ್ತಿಗಳ ಪ್ರಕಟಣೆಯ ಸಂಜೆಯ ಕ್ಷಣಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದರು.
 
ಬೆಂಗಳೂರಿನ ಚಾನ್ಸರಿ ಪೆವಿಲಿಯನ್‍ನಲ್ಲಿ ಎಜುಕೇಶನ್ ಟುಡೆ ಸಂಸ್ಥೆ ಆಯೋಜಿಸಿದ್ದ 4 ನೇ ರಾಷ್ಟ್ರೀಯ ಶಾಲಾ ಪ್ರತಿಭಾ ಪ್ರಶಸ್ತಿ ಸಮಾರಂಭ ಮತ್ತು ಕೆ12 ಲೀಡರ್‍ಶಿಪ್ ಸಮ್ಮೇಳನದ ತುಣುಕುಗಳಿವು. ಮೆರಿಟ್ ಅವಾರ್ಡ್‍ಗಳನ್ನು ಪ್ರತಿಭೆ ಮತ್ತು ರ್ಯಾಂಕ್ ಆಧಾರದಲ್ಲಿ 5 ವರ್ಗಗಳಲ್ಲಿ ವಿತರಿಸಲಾಯಿತು.
 
 ಅತ್ಯುತ್ತಮ 20 ಸಿಬಿಎಸ್‍ಇ ಶಾಲೆಗಳು
 
 ಅತ್ಯುತ್ತಮ 20 ಐಸಿಎಸ್‍ಇ ಶಾಲೆಗಳು
 
 ಅತ್ಯುತ್ತಮ 20 ಪ್ರಿಸ್ಕೂಲ್ಸ್
 
 ಅತ್ಯುತ್ತಮ 20 ಬಾಲಕ ಮತ್ತು ಬಾಲಕಿಯರು
 
 ಅತ್ಯುತ್ತಮ 20 ಬೋರ್ಡಿಂಗ್ ಮತ್ತು ಇಂಟರ್‍ನ್ಯಾಷನಲ್ ಶಾಲೆಗಳು.
 
ಈ ಪ್ರಶಸ್ತಿಗಳ ಬಗ್ಗೆ ಮಾತನಾಡಿದ ಎಜುಕೇಶನ್ ಟುಡೆ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅನಿಲ್ ಶರ್ಮಾ ಅವರು, ``ಕಳೆದ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಗೌರವಿಸಲೆಂದು ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 
 
ಶಿಕ್ಷಣ ಕ್ಷೇತ್ರವೆಂಬುದು ಒಂದು ಕ್ರಿಯಾತ್ಮಕ ಕ್ಷೇತ್ರವಾಗಿದೆ. ಇಲ್ಲಿ ನಾವು ನಿರಂತರವಾಗಿ ಸ್ಥಿರವದ ಕೆಲಸ ಮಾಡುತ್ತಾ ಈ ಕ್ಷಣದ ಅಗತ್ಯತೆಗಳನ್ನು ಪೂರೈಸಬೇಕಾಗಿರುತ್ತದೆ. ಈ ಸಮ್ಮೇಳನದಲ್ಲಿ ಶಿಕ್ಷಣ ಕ್ಷೇತ್ರದ ಅತ್ಯುತ್ತಮ ಸಾಧಕರು, ತಜ್ಞರು ಒಂದೆಡೆ ಸೇರಿದ್ದಾರೆ. ಅವರು ಈ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಅತ್ಯಮೂಲ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ’’ ಎಂದು ತಿಳಿಸಿದರು.
 
ಎಜುಕೇಶನ್ ಟುಡೆಯ ಸಲಹೆಗಾರರಾದ ಉಷಾ ಮೋಹನ್ ಅವರು ಮಾತನಾಡಿ, ``ಈ ಸಮ್ಮೇಳನದಲ್ಲಿ ಅತ್ಯುತ್ತಮವಾದ ಉಪನ್ಯಾಸಕರು ವೇದಿಕೆ ಹಂಚಿಕೊಂಡಿದ್ದುದು ಹೆಮ್ಮೆಯ ವಿಚಾರ. ಪೊದಾರ್ ನೆಟ್‍ವರ್ಕ್‍ನ ಅಧ್ಯಕ್ಷರಾದ ಸ್ವಾತಿ ಪೋಪಟ್ ವತ್ಸ್ ಅವರು ಅರ್ಲಿ ಚೈಲ್ಡ್‍ವುಡ್ ಅಸೋಸಿಯೇಶನ್ ಬಗ್ಗೆ ಮಾತನಾಡಿದರು. 
 
ಸಂಸ್ಕøತಿಯ ವೈವಿಧ್ಯತೆ, ಪರ್ಯಾಯ ಶಿಕ್ಷಣ ಮತ್ತು 21 ನೇ ಶತಮಾನದ ಶಿಕ್ಷಣ ಪದ್ಧತಿ ಬಗ್ಗೆ ದುಂಡು ಮೇಜಿನ ಚರ್ಚೆಗಳು ನಡೆದವು. ಇನ್‍ವೆಂಚರ್ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ನೂರೈನ್ ಫಜಲ್, ಕೆ.ಕೆ.ಎಜುಕೇಶನ್ ಟ್ರಸ್ಟ್‍ನ ಖಜಾಂಚಿ ಮನ್ಸೂರ್ ಆಲಿ ಖಾನ್, ಡೀನ್ಸ್ ಅಕಾಡೆಮಿಯ ಪ್ರಾಂಶುಪಾಲರಾದ ಶಾಂತಿ ಮೆನನ್, ಗ್ರೀನ್‍ವುಡ್ ಹೈಸ್ಕೂಲ್‍ನ ನಿರ್ದೇಶಕರಾದ ಮಾನಸ್ 
 
ಮೆಹ್ರೋತ್ರ ಮತ್ತು ಬೆಂಗಳೂರು ಇಂಟರ್‍ನ್ಯಾಷನಲ್ ಸ್ಕೂಲ್‍ನ ಪ್ರಾಂಶುಪಾಲರಾದ ಅನುಮೊಂಗಾ ಸೇರಿದಂತೆ ಇನ್ನೂ ಹಲವಾರು ಗಣ್ಯರು ಶಿಕ್ಷಣ ಕ್ಷೇತ್ರದ ಬೆಳವಣಿಗೆ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಬೆಳಕು ಚೆಲ್ಲಿದರು’’ ಎಂದು ತಿಳಿಸಿದರು. ಈ ಸಮ್ಮೇಳನವನ್ನು ಶಾಂತಿನಗರದ ಶಾಸಕರಾದ ಎನ್.ಎ.ಹ್ಯಾರೀಸ್ ಅವರು ಉದ್ಘಾಟಿಸಿದರು.
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments