ಅಧಿಕ ಮೌಲ್ಯದ ನೋಟು ನಿಷೇಧದಿಂದ ಸ್ಮಾರ್ಟ್‍ಫೋನ್ ಮಾರುಕಟ್ಟೆಗೆ ಭಾರಿ ಹೊಡೆತ ನೀಡಿದೆ. ಕಳೆದ ವರ್ಷ ನಡೆದ ನೊಟು ನಿಷೇಧದ ಪ್ರಭಾವದಿಂದ ಫೋನ್ ಮಾರಾಟ ಕುಸಿದಿದೆ ಎಂದು ಅಂತಾರಾಷ್ಟ್ರೀಯ ಡಾಟಾ ಕಾರ್ಪೊರೇಷನ್ (ಐಡಿಸಿ) ಮಂಗಳವಾರ ಹೇಳಿದೆ.
ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಸ್ಮಾರ್ಟ್‌ಫೋನ್ ಮಾರಾಟ ಶೇ.30.5ರಷ್ಟು ಕುಸಿತ ಕಂಡಿದೆ ಎಂದು ಐಡಿಸಿ ತಿಳಿಸಿದೆ. ಭಾರತದಲ್ಲಿ 50 ಪ್ರಮುಖ ನಗರಗಳಲ್ಲಿ ಐಡಿಸಿ ನಡೆಸಿದ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ. ನೋಟು ನಿಷೇಧ ಭಾರತೀಯ ಕಂಪೆನಿಗಳ ಮೇಲೆ ಹೆಚ್ಚಾಗಿ ಬಿದ್ದಿದೆ ಎಂದಿದೆ.
ಭಾರತೀಯ ಕಂಪೆನಿಗಳ ಫೋನ್ ಮಾರಾಟ ಶೇ.37.2ರಷ್ಟು ಕುಸಿದಿದ್ದು, ಚೀನಾ ಕಂಪೆನಿ ಫೋನ್ ಮಾರಾಟದಲ್ಲಿ ಶೇ.26ರಷ್ಟು ಕಡಿಮೆಯಾಗಿದೆ. ಅಂತಾರಾಷ್ಟೀಯ ಕಂಪೆಇಗಳ ಫೋನ್ ಮಾರಾಟ ಶೇ.30.5ರಷ್ಟು ಕಡಿಮೆಯಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಅದೇ ರೀತಿ ಭಾರತದ ಮೊದಲ ಗ್ರೇಡ್ ನಗರಗಳಲ್ಲಿ ಶೇ.31.7ರಷ್ಟು ಮಾರಾಟ ಕುಸಿತ ಕಂಡಿದ್ದು, ಎರಡು, ಮೂರು, ನಾಲ್ಕು ಗ್ರೇಡ್ ನಗರಗಳಲ್ಲಿ ಶೇ.29.5ರಷ್ಟು ಮಾರಾಟ ಕಡಿಮೆಯಾಗಿದೆ ಎಂದು ಐಡಿಸಿ ಬಹಿರಂಗಪಡಿಸಿದೆ. ಕಳೆದ ವರ್ಷ ನವೆಂಬರ್ 8ರಂದು ಪ್ರಧಾನಿ ಮೋದಿ ರೂ.500, ರೂ.1000 ನೋಟುಗಳನ್ನು ನಿಷೇಧಿಸಿದ್ದು ಗೊತ್ತೇ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.